ಬಂಟ್ವಾಳದಲ್ಲಿ “ವಕೀಲರ ಭವನ” ನಿರ್ಮಾಣಕ್ಕೆ ಪ್ರಯತ್ನ: ರಾಜೇಶ್ ನಾಯ್ಕ್
ಬಂಟ್ವಾಳ: ಇಲ್ಲಿನ ವಕೀಲರ ಬಹುಕಾಲದ ಬೇಡಿಕೆಯಲ್ಲೊಂದಾಗಿರುವ “ವಕೀಲರ ಭವನ” ನಿರ್ಮಾಣಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಈ ನಿಟ್ಟಿನಲ್ಲಿ ಜಮೀನು ಗುರುತಿಸಿ ಮಂಜೂರು ಮಾಡಲು ಸಂಬಂಧಪಟ್ಟ ಇಲಾಖೆಗೂ ಸೂಚಿಸಲಾಗುವುದು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಭರವಸೆ ನೀಡಿದರು.
ಶನಿವಾರ ಬಂಟ್ವಾಳ ವಕೀಲರ ಸಂಘದಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ನಡೆದ ವಕೀಲರ ಸಂಘದ ಅಭಿವೃದ್ಧಿ ಮತ್ತು ಡಿಜಿಟಲೀಕರಣ ಕಾಮಗಾರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇದೇ ವೇಳೆ ಶಾಶಕರ ಪ್ರದೇಶಾಭಿವೃದ್ದಿ ಯೋಜನೆಯಡಿಯಲ್ಲಿ ಅನುದಾನ ತರುವಲ್ಲಿ ಶ್ರಮಿಸಿದ ವಕೀಲ ಪ್ರಸಾದ್ ಕುಮಾರ್ ರೈ ಮತ್ತು ಬಿಜೆಪಿ ಕಾನೂನು ಪ್ರಕೋಷ್ಠ ಬಂಟ್ವಾಳ ಮಂಡಲದ ಸಂಚಾಲಕರು, ಯುವ ನ್ಯಾಯವಾದಿ ವೀರೇಂದ್ರ ಎಂ.ಸಿದ್ದಕಟ್ಟೆ ಅವರನ್ನು ವಕೀಲರ ಸಂಘ ವತಿಯಿಂದ ಗೌರವಿಸಲಾಯಿತು.
ವಕೀಲರ ಸಂಘದ ಅಧ್ಯಕ್ಷ ರಿಚರ್ಡ್ ಕೊಸ್ತ ಎಂ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವಕೀಲರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹಿರಿಯ, ಕಿರಿಯ ವಕೀಲರು ಹಾಜರಿದ್ದರು. ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ, ನ್ಯಾಯವಾದಿ ಅರುಣ್ ರೋಷನ್ ಡಿ ಸೋಜ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಸುನೀತಾ ಕೆ ವಂದಿಸಿದರು. ನ್ಯಾಯವಾದಿ ನಿತಿನ್ ಕಾರ್ಯಕ್ರಮ ನಿರೂಪಿಸಿದರು.