ಶ್ರೀ ಅಖಿಲೇಶ್ವರ ಓಂಕಾರ ಭಜನಾ ಮಂಡಳಿಯ ೮ನೇ ವರ್ಷಾಚರಣೆ ಪ್ರಯುಕ್ತ “ಅಹೋರಾತ್ರಿ ಏಕಾಹ ಭಜನೋತ್ಸವ”
ಕೈಕಂಬ: ಶ್ರೀ ಅಖಿಲೇಶ್ವರ ದೇವಸ್ಥಾನ ಪೊಳಲಿ ಇಲ್ಲಿನ ಶ್ರೀ ಅಖಿಲೇಶ್ವರ ಓಂಕಾರ ಭಜನಾ ಮಂಡಳಿ ಪೊಳಲಿ ಇದರ ಎಂಟನೇ ವರ್ಷಾಚರಣೆ ಪ್ರಯುಕ್ತ ದ.೯ರಂದು ಶನಿವಾರ ಸೂರ್ಯೋದಯದಿಂದ ದ.೧೦ರ ಭಾನುವಾರ ಸೂರ್ಯೋದಯದವರೆಗೆ “ಅಹೋರಾತ್ರಿ ಏಕಾಹ ಭಜನಾ ಮಹೋತ್ಸವ” ನಡೆಯಲಿರುವುದು.

ದ.9ರಂದು ಶನಿವಾರ ಬೆಳಗ್ಗೆ ದೀಪ ಪ್ರಜ್ವಲಿಸಿ ಅಹೋರಾತ್ರಿ ಭಜನಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಪೊಳಲಿ ದೇವಳದ ಅರ್ಚಕ ಕೆ. ರಾಮ್ ಭಟ್, ಮಾದುಕೋಡಿ ಕೊರಗಜ್ಜ ಸಾನಿಧ್ಯದ ಧರ್ಮದರ್ಶಿ ವಿಜಯ ಸುವರ್ಣ, ಸತೀಶ್ ಪೂಂಜ, ಶ್ರೀ ಅಖಿಲೇಶ್ವರ ದೇವಳದ ಅರ್ಚಕ ವಾಸುದೇವ ಮಯ್ಯ, ಅಖಿಲೇಶ್ವರ ಓಂಕಾರ ಭಜನಾ ಮಂಡಳಿಯ ಅಧ್ಯಕ್ಷ ಸದಾಶಿವ ಮೊಯ್ಲಿ ,ವಸಂತ ಸಪಲಿಗ, ಮುರಳಿ ಪೊಳಲಿ, ಸುಮನ್ ರಾಜ್ ಪೊಳಲಿ ಹಾಗೂ ಹರೀಶ್ ಮಣಿಕಂಠಪುರ ಉಪಸ್ಥಿತರಿದ್ದರು.

ದ.೧೦ರಂದು ಭಾನುವಾರ ಸಂಜೆ “ಆನಂದ ಭಜನೆ” ಹಾಗೂ ದ.೧೧ರಂದು ಸೋಮವಾರ ಸಂಜೆ “ವಾರದ ಭಜನೆ”ಯು ವಿವಿಧ ಭಜನಾ ತಂಡಗಳಿಂದ ನೆರವೇರಲಿರುವುದು.


