ಗೋಳಿದಡಿಗುತ್ತಿನ ‘ವರ್ಸೊದ ಪರ್ಬ’ಕ್ಕೆ ವಿವಿಧ ಸಮಿತಿ ರಚನೆ
ಕೈಕಂಬ: ಗುರುಪುರದ ಗೋಳಿದಡಿಗುತ್ತಿನಲ್ಲಿ ಮುಂದಿನ ವರ್ಷದ ಜನವರಿ ೧೯, ೨೦ ಮತ್ತು ೨೧ರಂದು ನಡೆಯಲಿರುವ `ಗುತ್ತುದ ವರ್ಸೊದ ಪರ್ಬ’ ಹಾಗೂ ಸಾಂಸ್ಕೃತಿ ಕಾರ್ಯಕ್ರಮ ಆಯೋಜನೆ ಕುರಿತು ಗುತ್ತಿನ ಚಾವಡಿಯಲ್ಲಿ ಡಿ. ೩ರಂದು ವಿಶೇಷ ಸಭೆ ನಡೆಯಿತು.
ಗುತ್ತಿನ ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಅವರು ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವೂ ಪರ್ಬವು ಧರ್ಮಾಚರಣೆಯ ನೆಲೆಗಟ್ಟಿನಲ್ಲಿ ನಡೆಯುವುದರ ಜೊತೆಗೆ ಜಾತ್ಯತೀತತೆಗೆ ಒತ್ತು ನೀಡಬೇಕು.
ಸಾವಿರಾರು ಜನರು ಸೇರುವ ಪರ್ಬಾಚರಣೆಯ ದಿನಗಳಲ್ಲಿ ಎಲ್ಲೂ ಯಾರಿಂದಲೂ ದೂರುಗಳು ಬರಕೂಡದು. ಪರ್ಬ ನಡೆಸುವಲ್ಲಿ ಸರ್ವರ ಸಹಕಾರ ಅವಶ್ಯ ಎಂದರು.
ಸಮಿತಿಯ ಪ್ರಮುಖರು ಸಲಹೆ ಸೂಚನೆ ನೀಡಿದರು. ಪರ್ಬ ಆಯೋಜನೆಗಾಗಿ ಸ್ವಾಗತ, ಅನ್ನದಾನ, ಕಲ್ಲಂಗಡಿ ವಿತರಣೆ, ಮಹಿಳೆಯರಿಗೆ ಗಾಜಿನ ಬಳೆ ಇಡುವುದು, ನೀರು, ಸ್ವಚ್ಛತೆ, ಪ್ರಸಾದ ವಿತರಣೆ, ಮತ್ತಿತರ ಜವಾಬ್ದಾರಿಗಳಿಗೆ ಪ್ರತ್ಯೇಕ ಸಮಿತಿ ರಚಿಸಲಾಯಿತು.
ಸಭೆಯಲ್ಲಿ ಗೋಳಿದಡಿಗುತ್ತಿನ ಯಜಮಾನಿ ಉಷಾ ವರ್ಧಮಾನ ಶೆಟ್ಟಿ, ಅವರ ಮಕ್ಕಳು, ವಿವಿಧ ಗುತ್ತುಗಳ ಪ್ರಮುಖರು, ಗಣ್ಯರು, ಗುತ್ತಿನ ಚಾವಡಿ ಮಿತ್ರರು ಉಪಸ್ಥಿತರಿದ್ದರು. ದೀಪಾ ಅವರು ವಂದಿಸಿದರು.