ಪೊಳಲಿ ಶ್ರೀ ರಾಜರಾಜೇಶ್ವರೀ ಸನ್ನಿಧಿಯಲ್ಲಿ ರಂಗಪೂಜೆ
ಪೊಳಲಿ: ಶ್ರೀ ಕ್ಷೇತ್ರ ಪೊಳಲಿಯಲ್ಲಿ ೫೦ ವರ್ಷಗಳ ಕಾಲ ಅರ್ಚಕರಾಗಿ ಸೇವೆ ಸಲ್ಲಿಸಿದ ನಾರಾಯಣ ಭಟ್ ಅವರ ೭೭ನೇ ವರ್ಷದ ಜನುಮ ದಿನವನ್ನು ಸರಳವಾಗಿ ಆಚರಿಸಿ ತಾಯಿ ರಾಜರಾಜೇಶ್ವರಿಗೆ ಸೇವಾರ್ಥವಾಗಿ ರಂಗಪೂಜೆ ನೆರವೇರಿಸಿದರು.


ಕ್ಷೇತ್ರದ ಅನುವಂಶಿಕ ಮೊಕ್ತೇಸರ ಪವಿತ್ರಪಾಣಿ ಮಾಧವ್ ಭಟ್, ಅರ್ಚಕ ಕೆ.ರಾಮ್ ಭಟ್ ಪೊಳಲಿ ಉಪಸ್ಥಿತರಿದ್ದು ಬಲಿ ಉತ್ಸವ ನಡೆದ ಬಳಿಕ ನಾರಾಯಣ್ ಭಟ್ ಮತ್ತು ವಿಜಯಲಕ್ಷ್ಮೀ ದಂಪತಿಗಳು ಹಾಗೂ ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಹಿತೈಷಿಗಳು ಪೂಜೆಯಲ್ಲಿ ಭಾಗಿಯಾಗಿ ಪ್ರಸಾದ ಸ್ವೀಕರಿಸಿದರು.


