ಬಂಟ್ವಾಳ: ಬಂಟ್ವಾಳದ ರಾಯಿ – ಕೊಯಿಲ ವಿವೇಕಾನಂದ ಚಾರಿಟೇಬಲ್ ಟ್ರಸ್ಟ್ ಮತ್ತು ಹಿಂದೂ ಧರ್ಮೋತ್ಥಾನ ವೇದಿಕೆ ಟ್ರಸ್ಟ್ ವತಿಯಿಂದ  ‘ಅಯೋಧ್ಯೆ ಶ್ರೀರಾಮ ಮಂದಿರ ಲೋಕಾರ್ಪಣೆ’ ಪ್ರಯುಕ್ತ ಜ.14ರಂದು ಕೊಯಿಲ ಹನುಮಾನ್ ನಗರದಲ್ಲಿ ‘ಮಹಾ ಚಂಡಿಕಾಯಾಗ ಮತ್ತು ರಾಮತಾರಕ ಮಂತ್ರ ಹೋಮ’ ಹಾಗೂ ಕಟೀಲು ಮೇಳದಿಂದ ‘ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಪ್ರವೀಣ ಅಂಚನ್ ಕೊಯಿಲ ಹೇಳಿದರು.

ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನದಲ್ಲಿ ಬುಧವಾರ ನಡೆದ ಆಮಂತ್ರಣಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇವಳದ ಅರ್ಚಕ ದಿನೇಶ ಭಟ್ ಆಮಂತ್ರಣಪತ್ರ ಬಿಡುಗಡೆಗೊಳಿಸಿದರು.

ಟ್ರಸ್ಟಿನ ಅಧ್ಯಕ್ಷ ಮಧುಕರ ಬಂಗೇರ ಮಾತನಾಡಿ, ಲೋಕ ಕಲ್ಯಾಣಕ್ಕಾಗಿ ನಡೆಯುವ ಈ ಧಾರ್ಮಿಕ ಕಾರ್ಯಕ್ರಮದ ಪೂರ್ವಭಾವಿಯಾಗಿ ಜ.12ರಂದು ರಾತ್ರಿ ರಾಜ್ಯ ಮಟ್ಟದ ಹೊನಲು ಬೆಳಕಿನ ಹಗ್ಗ-ಜಗ್ಗಾಟ ಪಂದ್ಯಾಟ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಸಮಿತಿ ಪ್ರಮುಖರಾದ ಹರೀಶ ಆಚಾರ್ಯ ರಾಯಿ, ಕೆ.ಪರಮೇಶ್ವರ ಪೂಜಾರಿ, ಬಿ.ದಯಾನಂದ ಸಪಲ್ಯ ಬೊಲ್ಪೊಟ್ಟು, ವಸಂತ ಗೌಡ ಮುದ್ದಾಜೆ, ಚಂದ್ರಶೇಖರ ಗೌಡ ಕಾರಂಬಡೆ, ರಾಘವ ಅಮೀನ್, ಕೃಷ್ಣಪ್ಪ ಪೂಜಾರಿ ಕಾರಂಬಡೆ, ಭೋಜ ಶೆಟ್ಟಿ ಹೋರಂಗಳ, ಹರೀಶ ಪೂಜಾರಿ ಕೊಯಿಲ, ಸತೀಶ ಸಪಲ್ಯ ಬೊಲ್ಪೊಟ್ಟು, ವಸಂತ ಬಂಗೇರ ಕೈರೋಳಿ, ಮನೋಹರ ಚಿಂಗಲಚ್ಚಿಲ್, ವಿಜಯ ಸಪಲ್ಯ ಕೊಯಿಲ, ಆನಂದ ಪೂಜಾರಿ ಕುದ್ಮಣಿ, ಧೀರಜ್ ಕೊಯಿಲ, ಸಾಗರ್ ಕೊಯಿಲ, ಕುಸುಮಾ ಅಣ್ಣಳಿಕೆ, ಅನ್ನಪೂರ್ಣ, ಉಷಾ ಪೂಜಾರಿ ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *