ದಾಸಕೋಡಿ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ, ಸ್ತ್ರೀ ಶಕ್ತಿ ಪ್ರತಿಭಾ ದಿನೋತ್ಸವ ಕಾರ್ಯಕ್ರಮ
ಬಂಟ್ವಾಳ: ಬಂಟ್ವಾಳ ತಾಲೂಕಿನ ದಾಸಕೋಡಿ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಹಾಗೂ ಸ್ತ್ರೀಶಕ್ತಿ ಪ್ರತಿಭಾ ದಿನೋತ್ಸವ ಕಾರ್ಯಕ್ರಮ ಪಂಚಾಯತ್ ಸುವರ್ಣ ಸೌಧ ಸಭಾಂಗಣದಲ್ಲಿ ಸೋಮವಾರ ನಡೆಯಿತು.

ಮಕ್ಕಳ ಅಧ್ಯಕ್ಷೆ ಪುಟಾಣಿ ಚಾರ್ವಿ, ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಬಿ. ಕೆ ಅಣ್ಣು ಪೂಜಾರಿ ಗೆಜ್ಜೆಗಿರಿ ಅವರೊಂದಿಗೆ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭ ಮಕ್ಕಳಿಗೆ ನೆಹರು ಟೋಪಿಯನ್ನು ತೊಡಿಸಿ, ಶಾಲು ಹಾಕಿ, ಗುಲಾಬಿ ನೀಡಿ ಗೌರವಿಸಲಾಯಿತು. ಸ್ತ್ರೀ ಶಕ್ತಿ ಸದಸ್ಯರು ತಯಾರಿಸಿದ ಕೈ ಚೀಲವನ್ನು ಬಿಡುಗಡೆಗೊಳಿಸಲಾಯಿತು. ಬಳಿಕ ಸಾಮೂಹಿಕ ಹುಟ್ಟು ಹಬ್ಬವನ್ನು ಮಾಡಲಾಯಿತು.
ದೈಹಿಕ ಶಿಕ್ಷಕ ರಾಧಾಕೃಷ್ಣ ಅಡ್ಯಂತಾಯ, ನಿತ್ಯಾನಂದ ಪ್ರಭು, ಉಪಾಧ್ಯಕ್ಷೆ ರಂಜನಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಲೀಲಾವತಿ, ಗೌರವ ಸದಸ್ಯೆ ಸವಿತಾ, ಮಹಿಳಾ ಮಂಡಳದ ಸದಸ್ಯೆ ಕವಿತಾ ಅಡ್ಯಂತಾಯ, ಬಾಲವಿಕಾಸ ಸದಸ್ಯ ಚಂದ್ರಶೇಖರ, ಬಾಲವಿಕಾಸ ಅಧ್ಯಕ್ಷೆ ಶುಭಶ್ರೀ, ಸಂಧ್ಯಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಲಕ್ಷ್ಮಿ, ಪ್ರಾ. ಆ. ಕೇಂದ್ರದ ಸುರಕ್ಷಣಾಧಿಕಾರಿ ಸರಸ್ವತಿ, ಅಂಗನವಾಡಿ ಕಾರ್ಯಕರ್ತೆ ಲಲಿತ.ಜಿ, ಸಹಾಯಕಿ ಯಶೋಧ, ಪಂಚಾಯತ್ ಸಿಬ್ಬಂದಿಗಳು, ಸ್ತ್ರೀ ಶಕ್ತಿ ಗುಂಪಿನ ಸದಸ್ಯರು ಹಾಗೂ ಪೋಷಕರು ಉಪಸ್ಥಿತರಿದ್ದರು.
ಅಮಿತ ಮತ್ತು ಪ್ರಜ್ಞಾ ಕಾರ್ಯಕ್ರಮ ನಿರೂಪಿಸಿದರು, ನಯನ ಸ್ವಾಗತಿಸಿ, ಸೌಮ್ಯ ವಂದಿಸಿದರು.