ಬಂಟ್ವಾಳ: ಗ್ರಾಮೀಣ ಪ್ರದೇಶದಲ್ಲಿ ಕೃಷಿಕರು ಮತ್ತು ಮಹಿಳೆಯರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸ್ವಂತ ಉದ್ಯೋಗ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸುವುದರ ಜೊತೆಗೆ ಗ್ರಾಹಕರಿಗೆ ತ್ವರಿತ ಮತ್ತು ಉತ್ಕೃಷ್ಟ ಸೇವೆಯಿಂದ ಮಹಾತ್ಮಾ ಗಾಂಧೀಜಿ ಕಂಡ ‘ಗ್ರಾಮ ಸ್ವರಾಜ್ಯ’ ಕನಸನ್ನು ಸಹಕಾರಿ ಬ್ಯಾಂಕು ನಿಜವಾಗಿಯೂ ನನಸು ಮಾಡಲು ಶ್ರಮಿಸುತ್ತಿದೆ ಎಂದು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದ್ದಾರೆ.
ತಾಲ್ಲೂಕಿನ ಕಾವಳಪಡೂರು ಗ್ರಾಮದ ವಗ್ಗ ಎಂಬಲ್ಲಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ವತಿಯಿಂದ ಶುಕ್ರವಾರ ಶುಭಾರಂಭಗೊಂಡ 88ನೇ ಶಾಖೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಚಾರಿ ಬ್ಯಾಂಕ್ ಆರಂಭಿಸಿ ಯಶಸ್ವಿಯಾಗಿದ್ದು, ಶೀಘ್ರವೇ ಗ್ರಾಹಕರು ತಮ್ಮ ಮೊಬೈಲ್ನಿಂದಲೇ ತ್ವರಿತ ವ್ಯವಹಾರ ನಡೆಸಲು ಅನುಕೂಲಕರ ಯೋಜನೆ ಜಾರಿಗೊಳಿಸಲು ಚಿಂತಿಸಲಾಗಿದೆ ಎಂದು ತಿಳಿಸಿದರು.

ಸಹಕಾರಿ ಬ್ಯಾಂಕಿನಿಂದ ‘ಗ್ರಾಮ ಸ್ವರಾಜ್ಯ’: ಎಂ.ಎನ್. ರಾಜೇಂದ್ರ ಕುಮಾರ್
28btl-Vogga bank
ಈಗಾಗಲೇ 95 ಸಾವಿರ ಮಂದಿ ರೈತರಿಗೆ ರೂಪೇ ಕಾರ್ಡ್ ವಿತರಿಸಲಾಗಿದ್ದು, ಬ್ಯಾಂಕಿನ ಶತಮಾನೋತ್ಸವ ಪ್ರಯುಕ್ತ ಮುಂದಿನ ಜನವರಿ ಅಂತ್ಯದೊಳಗೆ 101 ಶಾಖೆಯನ್ನು ತೆರೆಯಲಾಗುವುದು. ಡಿ.21ರಂದು ಪುತ್ತೂರಿನಲ್ಲಿ ಸಹಕಾರಿ ಪಿತಾಮಹ ದಿ.ಮೊಳಹಳ್ಳಿ ಶಿವರಾಯರ ಪ್ರತಿಮೆ ಅನಾವರಣಗೊಳಿಸಲಾಗುವುದು. ಬ್ಯಾಂಕಿಂಗ್ ವ್ಯವಹಾರಕ್ಕೆ ಹೊಸ ತಂತ್ರಜ್ಞಾನ ಅಳವಡಿಸಿ ಗ್ರಾಹಕರಿಗೆ ಮತ್ತಷ್ಟು ಸೌಕರ್ಯ ಒದಗಿಸಲಾಗುವುದು. 88ನೇ ಶಾಖೆ ಶುಭಾರಂಭದ ಹಿನ್ನಲೆಯಲ್ಲಿ ಸ್ಥಳೀಯರಿಗೆ ವಾಹನ ಸಾಲದಲ್ಲಿ ಒಂದು ತಿಂಗಳು ಬಡ್ಡಿ ವಿನಾಯಿತಿ ನೀಡುವುದರ ಜೊತೆಗೆ ನವೋದಯ ಸ್ವಸಹಾಯ ಗುಂಪಿನ ಸದಸ್ಯರಿಗೆ ಶಿಸ್ತು ಮತ್ತು ಸಮಾನತೆಗಾಗಿ ಉಚಿತ ಸಮವಸ್ತ್ರ ವಿತರಿಸುವುದಾಗಿ ಅವರು ತಿಳಿಸಿದರು.
ಕಾವಳಪಡೂರು ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ.ಪ್ರಮೋದ್ ಕುಮಾರ್ ರೈ ಗಣಕೀಕರಣ ಮತ್ತು ಕಾವಳಮೂಡೂರು ಸೇವಾ ಸಹಕಾರಿ ಸಂಘದ ಅಧ್ಯಕ್ಷ ಬಿ.ಪದ್ಮಶೇಖರ್ ಜೈನ್ ಭದ್ರತಾ ಕೋಶ ಉದ್ಘಾಟಿಸಿದರು. ಸ್ಕಾ ್ಯಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ ಶುಭ ಹಾರೈಸಿದರು. ಕಾವಳಮೂಡೂರು ಗ್ರಾ.ಪಂ.ಅಧ್ಯಕ್ಷ ಯಾಕೂಬ್ ಸಾಹೇಬ್, ಕಾವಳಪಡೂರು ಗ್ರಾ.ಪಂ. ಪ್ರಭಾರ ಅಧ್ಯಕ್ಷ ಅಬ್ದುಲ್ ರಜಾಕ್, ಕಟ್ಟಡ ಮಾಲೀಕ ಪಿ.ಜಿನರಾಜ ಆರಿಗ ಮತ್ತಿತರರು ಶುಭ ಹಾರೈಸಿದರು.
ಪ್ರಮುಖರಾದ ಸರಪಾಡಿ ಸುಬ್ಬಣ್ಣ ಶೆಟ್ಟಿ, ಜಿ. ಆನಂದ, ನರಸಿಂಹ ಹೊಳ್ಳ, ಯಶೋಧರ ಶೆಟ್ಟಿ, ಚೆನ್ನಪ್ಪ ಸಾಲಿಯಾನ್, ಡೀಕಯ್ಯ ಬಂಗೇರ, ಹರಿಶ್ಚಂದ್ರ ಪೂಜಾರಿ ಕಜೆಕಾರು, ಶಾಖಾಧಿಕಾರಿ ಸಂತೋಷ್ ಕುಮಾರ್ ಮತ್ತಿತರರು ಇದ್ದರು.
ಇದೇ ವೇಳೆ ಪಾಸ್ ಪುಸ್ತಕ, ಸಾಲ ಪತ್ರ ವಿತರಣೆ, ಅದೃಷ್ಟ ಚೀಟಿ ವಿಜೇತರಿಗೆ ಚಿನ್ನದ ನಾಣ್ಯ ಬಹುಮಾನ ವಿತರಿಸಲಾಯಿತು.
ಬ್ಯಾಂಕಿನ ನಿರ್ದೇಶಕ ಟಿ.ಜಿ.ರಾಜಾರಾಮ್ ಭಟ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಈಗಾಗಲೇ ಬ್ಯಾಂಕ್ ಒಟ್ಟು ರೂ 2,275 ಕೋಟಿ ಮೊತ್ತದ ಠೇವಣಾತಿ ಹೊಂದಿದ್ದು, ರೂ 1,872 ಕೋಟಿ ಸಾಲ ವಿತರಿಸಿದೆ ಎಂದರು.
ಬ್ಯಾಂಕಿನ ವ್ಯವಸ್ಥಾಪನಾ ನಿದರ್ೇಶಕ ಎಂ.ಗೋಪಾಲಕೃಷ್ಣ ಭಟ್ ವಂದಿಸಿದರು. ದಿನೇಶ್ ಅಮೀನ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *