ಗೋ ರಥಯಾತ್ರೆಗೆ ಕಲ್ಲಡ್ಕದಲ್ಲಿ ಸ್ವಾಗತ
ಬಂಟ್ವಾಳ: ಪುದುಗ್ರಾಮದ ರಾಧಾ ಸುರಭಿ ಗೋಮಂದಿರ, ರಾಷ್ಟ್ರೀಯ ಗೋ ಸೇವಾ ಸಂಸ್ಥಾನ, ಬ್ರಹ್ಮಗಿರಿ, ಗೋವಿನ ತೋಟ ಮತ್ತು ಗೋ ಸೇವಾ ಗತಿ ವಿಧಿ ಕರ್ನಾಟಕ ಇದರ ಸಂಯುಕ್ತಾಶ್ರಯದಲ್ಲಿ ಗೋ ನವರಾತ್ರಿ ಉತ್ಸವದ ಸಂದೇಶ ಮತ್ತು ಉದ್ದೇಶವನ್ನು ಸಾರುವ ಗೋರಥ ಯಾತ್ರೆಯನ್ನು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಸ್ವಾಗತಿಸಲಾಯಿತು.
ಪುತ್ತೂರು ವಿವೇಕಾಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕರವರು ಪುಷ್ಪಾರ್ಚನೆ ಹಾಗೂ ಆರತಿ ಬೆಳಗುವ ಮೂಲಕ ಸ್ವಾಗತಿಸಿದರು.
ವಿದ್ಯಾರ್ಥಿ, ಉಪನ್ಯಾಸಕ ವೃಂದವು ಮೆರವಣಿಗೆಯಲ್ಲಿ ರಥವನ್ನು ವಿದ್ಯಾಲಯದ ಪ್ರಾಂಗಣಕ್ಕೆ ಬರಮಾಡಿಕೊಂಡ ಬಳಿಕ ಆಜಾದ್ ಭವನದಲ್ಲಿ ಸಭಾಕಾರ್ಯಕ್ರಮವು ನಡೆಯಿತು.
ದಾವಣಗೆರೆ ಬಿಳಿಚ್ಚೋಡ್ ನ ಕೃಷಿಕರು, ಗೋಶಾಲೆ ನಡೆಸುತ್ತಿರುವ ಗೋ ಸೇವಾ ಗತಿ ವಿಧಿಯ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕ ಕುಮಾರಸ್ವಾಮಿ ಅವರು ವಿದ್ಯಾರ್ಥಿಗಳ ಜೊತೆಗೆ ಗೋ ಸಂರಕ್ಷಣೆಯ ವಿಷಯವಾಗಿ ಸಂವಾದ ನಡೆಸಿದರು.
ಮಾನವಿಕ ಸಂಘದ ನಿರ್ದೇಶಕ ಗಂಧರ್ವ ಹಾಗೂ ಸಾಂಸ್ಕೃತಿಕ ಸಂಘದ ನಿರ್ದೇಶಕಿ ಜಯಲಕ್ಷ್ಮಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಪುನೀತಾ ಸ್ವಾಗತಿಸಿ, ದೀಕ್ಷಾ ವಂದಿಸಿದರು. ಪ್ರತೀಕ ಕಾರ್ಯಕ್ರಮ ನಿರ್ವಹಿಸಿದರು.