ಕಾರ್ಮೆಲ್ ಕಾಲೇಜಿನ ವಿದ್ಯಾರ್ಥಿನಿ ಜೋಸ್ವಿಟಾಗೆ ಅಮೃತ ಕಲಶವನ್ನು ದೆಹಲಿಗೆ ತಲುಪಿಸುವ ಭಾಗ್ಯ
ಬಂಟ್ವಾಳ: ಕೇಂದ್ರ ಸರ್ಕಾರದ “ನನ್ನ ನೆಲ ನನ್ನ ದೇಶ” ಅಭಿಯಾನದಡಿ ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಸಂಗ್ರಹಿಸಿದ ಮಣ್ಣನ್ನು, ಅಮೃತ ಕಲಶವನ್ನು ದೆಹಲಿಗೆ ತಲುಪಿಸಲು ಬಿ.ಸಿ.ರೋಡಿಗೆ ಸಮೀಪದ ಮೊಡಂಕಾಪು ಕಾರ್ಮೆಲ್ ಕಾಲೇಜಿನ ವಿದ್ಯಾರ್ಥಿನಿ ಜೋಸ್ವಿಟಾ ಗೆ ಭಾಗ್ಯ ದೊರೆತಿದೆ.
ದಕ್ಷಿಣ ಕನ್ನಡ ಜಿಲ್ಲೆಯಿಂದ ತೆರಳುವ 14 ಮಂದಿ ವಿದ್ಯಾರ್ಥಿಗಳಲ್ಲಿ ಬಂಟ್ವಾಳ ಪುರಸಭೆ ವ್ಯಾಪ್ತಿಯ ಒರ್ವ ವಿದ್ಯಾರ್ಥಿನಿಗೆ ಭಾಗವಹಿಸಲು ಅವಕಾಶ ದೊರಕಿದೆ.
ಸಂಗ್ರಹಿಸಲಾದ ಮಣ್ಣಿನ ಅಮೃತ ಕಲಶವನ್ನು ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ಅವರು ವಿದ್ಯಾರ್ಥಿನಿ ಜೋಸ್ವಿಟಾಗೆ ಹಸ್ತಾಂತರಗೈದು, ಶುಭಹಾರೈಸಿ ಬೀಳ್ಕೊಟ್ಟರು.