52ನೇ ವರ್ಷದ ʼವಿಟ್ಲ ದಸರಾʼ ಸಮಾರೋಪ ಸಮಾರಂಭ
ವಿಟ್ಲ: ಉದ್ಯಮಿ ಪಿ ಸುಬ್ರಾಯ ಪೈ ಯವರ ಅಧ್ಯಕ್ಷತೆಯಲ್ಲಿ ಶ್ರೀ ದೇವತಾ ಸಮಿತಿ ವಿಟ್ಲ ಇದರ 52 ವರ್ಷದ ‘ವಿಟ್ಲ ದಸರಾ’ ದ ಸಮಾರೋಪ ಸಮಾರಂಭ ನಡೆಯಿತು.
ಮುಖ್ಯ ಅತಿಥಿಗಳಾಗಿ ಪುತ್ತೂರು ವಿವೇಕಾನಂದ ಬಿ.ಝೆಡ್. ಕಾಲೇಜಿನ ಪ್ರಾಂಶುಪಾಲೆ ಶೋಭಿತಾ ಸತೀಶ್, ವಿಟ್ಲ ಸಿಟಿ ಲಯನ್ಸ್ ಕ್ಲಬ್ ಅಧ್ಯಕ್ಷ ಜಯರಾಮ ಬಲ್ಲಾಳ ಮತ್ತು ವಿಟ್ಲ ಹಿಂದೂ ಯುವ ಸೇನೆ ಅಧ್ಯಕ್ಷ ಪಲಿಮಾರು ರಘುಪತಿ ಪೈ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಆಯೋಜಿಸಿದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಶ್ರೀ ದೇವತಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಯಕ್ ಸ್ವಾಗತಿಸಿದರು. ಕಾರ್ಯದರ್ಶಿ ಗೋಕುಲ್ ದಾಸ್ ಶೆಣೈ ವಂದಿಸಿದರು. ಜೇಸಿ ಶಾಲಾ ಆಡಳಿತಾಧಿಕಾರಿ ರಾಧಾಕೃಷ್ಣ ಎರುಂಬು ನಿರೂಪಿಸಿದರು.
ದೇವತಾ ಸಮಿತಿ ಉಪಾಧ್ಯಕ್ಷರುಗಳಾದ ಅಶೋಕ ಕುಮಾರ್ ಶೆಟ್ಟಿ, ಕೆ ಸದಾಶಿವ ಆಚಾರ್ಯ ಮತ್ತು ಪ್ರಭಾಕರ ಆಚಾರ್ಯ ಜತೆ ಕಾರ್ಯದರ್ಶಿಗಳಾದ ವಿ ರಾಘವೇಂದ್ರ ಪೈ, ಶೀನ ಕಾಶಿಮಠ ಮತ್ತು ರವಿಚಂದ್ರ ಕಾಮತ್, ಕೋಶಾಧಿಕಾರಿಗಳಾದ ಕೆ ಕೃಷ್ಣಪ್ರಸಾದ್ ಶೆಣೈ ಮತ್ತು ಮೋನಪ್ಪ ಗೌಡ ಶಿವಾಜಿನಗರ, ನಿತ್ಯಾನಂದ ನಾಯಕ್, ಕರುಣಾಕರ ಶೆಟ್ಟಿಗಾರ್, ಸುಭಾಶ್ಚಂದ್ರ ನಾಯಕ್, ರಾಂಪ್ರಕಾಶ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.
ಶ್ರೀ ದೇವಿಯ ಶೋಭಾಯಾತ್ರೆಯ ಬಳಿಕ ಶ್ರೀ ಅನಂತೇಶ್ವರ ದೇವಸ್ಥಾನದ ಕೆರೆಯಲ್ಲಿ ವಿಗ್ರಹ ವಿಸರ್ಜನೆ ಮಾಡಲಾಯಿತು.