ಪ್ರಧಾನಿ ನರೇಂದ್ರ ಮೋದಿ ಜನ್ಮದಿನ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ
ವಿಟ್ಲ: ಪ್ರಧಾನಿ ನರೇಂದ್ರ ಮೋದಿ ಜನ್ಮದಿನ ದ ಅಂಗವಾಗಿ ವಿಟ್ಲ ಮಹಾಶಕ್ತಿ ಕೇಂದ್ರದ ವತಿಯಿಂದ 17ರಂದು ಭಾನುವಾರ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಅರುಣ್ ವಿಟ್ಲ, ಕಾರ್ಯದರ್ಶಿ ಕರುಣಾಕರ ನಾಯ್ತೊಟ್ಟು,ಸದಸ್ಯರುಗಳಾದ ರಾಮದಾಸ್ ಶೆಣೈ ಮತ್ತು ಜಗದೀಶ್ ಪಾಣೆಮಜಲು,ಪುತ್ತೂರು ಮಂಡಲ ಸದಸ್ಯ ಮೋಹನದಾಸ್ ಉಕ್ಕುಡ,ಶಕ್ತಿ ಕೇಂದ್ರ ಅಧ್ಯಕ್ಷರುಗಳಾದ ವೀರಪ್ಪ ಗೌಡ,ಲೋಕನಾಥ ಶೆಟ್ಟಿ ಮತ್ತು ಹರೀಶ್ ಸಿ ಹೆಚ್,ಮಹಿಳಾ ಮೋರ್ಚ ಅಧ್ಯಕ್ಷೆ ಚಂದ್ರಕಾತಿ ಶೆಟ್ಟಿ,ಪಂಚಾಯತ್ ಸದಸ್ಯರುಗಳಾದ ಅಶೋಕ್ ಕುಮಾರ್ ಶೆಟ್ಟಿ,ಜಯಂತ,ಕೃಷ್ಣ ಎನ್, ವಸಂತ ಮತ್ತು ಸಂಗೀತ ಪಿ,ವಿಟ್ಲ ಅರಮನೆಯ ಕೃಷ್ಣಯ್ಯ ಕೆ,ಜಯರಾಮ ಬಲ್ಲಾಳ,ನರ್ಸಪ್ಪ ಪೂಜಾರಿ,ಶಿವಪ್ಪ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.