ವಿಠ್ಠಲ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಿಗೆ ಮಾಹಿತಿ ಕಾರ್ಯಾಗಾರ
ವಿಟ್ಲ: ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ವಿಟ್ಲದ ವಿಠ್ಠಲ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಿಗೆ ಹಾಗೂ ತಾಯಂದಿರಿಗೆ ‘ಮೈತ್ರಿ ಮುಟ್ಟಿನ ಕಪ್’ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಸಲಾಯಿತು.
ವಿಟ್ಲ ಸಮುದಾಯ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ವೇದಾವತಿ ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಯಾಗಿ ಭಾಗವಹಿಸಿದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕುಸುಮ ಮಾತನಾಡಿ ಮಕ್ಕಳ ಹೆತ್ತವರು ಕೂಡಾ ಇಂತಹ ಸಾಧನಗಳ ಉಪಯೋಗಕ್ಕೆ ಭಯಪಡದೆ ಇದರ ಸದುಪಯೋಗದ ಅರಿವನ್ನು ಅರಿತು ಮೂಢನಂಬಿಕೆಗಳಿಂದ ಹೊರ ಬರಬೇಕು ಅದೊಂದು ತಾಯ್ತನದ ಹೆಬ್ಬಾಗಿಲು ಎಂದು ವಿವರಿಸಿದರು.
ಉಪನ್ಯಾಸಕಿ ಚಂದ್ರಕಲಾ ವೇದಿಕೆಯಲ್ಲಿದ್ದರು. ತಾಲೂಕು ಮಟ್ಟದ ತರಬೇತುದಾರರಾದ ಅಕ್ಷತಾ, ಸುಮನ ಶಾಸ್ತ್ರಿ, ನಯನ, ದೀಕ್ಷಿತಾ, ಮೀನಾಕ್ಷಿ ಹಾಗೂ ಸುದಾಕ್ಷಿ ಮಾಹಿತಿ ನೀಡಿದರು.
ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಚಂದ್ರಾವತಿ, ಜ್ಯೋತಿ, ಸೌಮ್ಯ ಸಹಕರಿಸಿದರು. ಪ್ರಾಂಶುಪಾಲ ಆದರ್ಶ ಚೊಕ್ಕಾಡಿ ಸ್ವಾಗತಿಸಿದರು.
ಉಪನ್ಯಾಸಕಿಯರಾದ ಸಂಪಾವತಿ ವಂದಿಸಿ, ಜಲಜಾಕ್ಷಿ ನಿರೂಪಿಸಿದರು. ವಿದ್ಯಾರ್ಥಿನಿಯರಿಗೆ ಕಿಟ್ ನೀಡಲಾಯಿತು, ಪೋಷಕರು, ಉಪನ್ಯಾಸಕರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.