ಶಾರದ ಮಾತೆಯ ದರುಶನ ಪಡೆದ ಸಂಸದ,ಶಾಸಕರು
ಬಂಟ್ವಾಳ: ತಿರುಮಲ ಶ್ರೀ ವೆಂಕಟರಮಣ ದೇವಸ್ಥಾನ ಬಂಟ್ವಾಳದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಶ್ರೀ ಶಾರದಾ ಮಹೋತ್ಸವಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಅವರು ಬುಧವಾರ ಭೇಟಿ ನೀಡಿ ಶ್ರೀಶಾರದಾ ಮಾತೆಯ ದರುಶನ ಪಡೆದರು.
ಹಾಗೆಯೇ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವರ ದರುಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಪುರಸಭಾ ಸದಸ್ಯ ಗೋವಿಂದ ಪ್ರಭು, ಬಿಜೆಪಿ ಪ್ರಮುಖರಾದ ಉದಯ ಕುಮಾರ್ ರಾವ್, ಬಿ. ದೇವದಾಸ್ ಶೆಟ್ಟಿ, ಮಾಧವ ಮಾವೆ,ಪುರುಷೋತ್ತಮ ಶೆಟ್ಟಿ, ನಂದರಾಮ ರೈ ಮೊದಲಾದವರು ಉಪಸ್ಥಿತರಿದ್ದರು.