ಸಾರ್ವಜನಿಕ ಅನ್ನದಾನ ಮತ್ತು ಭಕ್ತಿಗೀತೆ ಕಾರ್ಯಕ್ರಮಕ್ಕೆ ಚಾಲನೆ
ಬಂಟ್ವಾಳ: ಪಾಣೆಮಂಗಳೂರು ಎಸ್ ವಿ ಎಸ್ ಶಾಲೆಯಲ್ಲಿ ನಡೆಯುತ್ತಿರುವ 99ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವದ ಪ್ರಯುಕ್ತ ವಿಜಯದಶಮಿಯಂದು ಇಲ್ಲಿನ ಸುಮಂಗಲಾ ಕಲ್ಯಾಣ ಮಂಟಪದಲ್ಲಿ ನಡೆದ ಸಾರ್ವಜನಿಕ ಅನ್ನದಾನ ಮತ್ತು ಭಕ್ತಿಗೀತೆ ಕಾರ್ಯಕ್ರಮವನ್ನು ಶಾಲೆಯ ಹಿರಿಯ ವಿದ್ಯಾರ್ಥಿಯಾದ ಬಿ. ಕೆ. ರಾಜ್ ನೇತೃತ್ವದಲ್ಲಿ ಹಿರಿಯ ವಿದ್ಯಾರ್ಥಿ ರಾಜಾ ಬಂಟ್ಟಾಳ್ ಅನ್ನ ಸ೦ತರ್ಪಣೆಗೆ ಚಾಲನೆ ನೀಡಿದರು.
ಹಿರಿಯ ವಿದ್ಯಾರ್ಥಿಗಳಾದ ಗಣೇಶ್ ಹೇರಳ, ಕೃಷ್ಣ ನಾಯ್ಕ್, ರಾಜೇಂದ್ರ ನಾಯಕ್, ಪ್ರೇಮನಾಥ್ ಶೆಟ್ಟಿ, ಪಿ. ಗಣೇಶ್ ನಾಯಕ್, ಕೆ. ವಸಂತ್ ಮಾಧವ್ ಕಾಮತ್ ಮತ್ತು ಭಕ್ತಿಗೀತೆ ಕಾರ್ಯಕ್ರಮದ ಸಂಯೋಜಕ ಮೆಲುದನಿ ತಂಡದ ಯಶವಂತ್ ಉಪಸ್ಥಿತರಿದ್ದರು.