ʼನೀರು ನಿಲ್ಲಿಸಿ, ನೀರು ಇಂಗಿಸಿ, ನೀರು ಉಳಿಸಿʼ ಅಭಿಯಾನ ನಡೆಸಲು ಪೂರ್ವಭಾವಿ ಸಭೆ
ಬಂಟ್ವಾಳ: ಮೊಡಂಕಾಪು ಚರ್ಚ್, ಪರಿಸರ ಆಯೋಗ, ಸಾಮಾಜಿಕ ಅಭಿವೃದ್ಧಿ ಆಯೋಗ, ರೈತ ಸಂಘ ಬಂಟ್ವಾಳ, ಯುವ ಶಕ್ತಿ ಸಂಘ ಇದರ ಮುಂದಾಳತ್ವದಲ್ಲಿ ನೀರು ನಿಲ್ಲಿಸಿ, ನೀರು ಇಂಗಿಸಿ, ನೀರು ಉಳಿಸಿ ಎಂಬ ಅಭಿಯಾನ ನಡೆಸಲು ಪೂರ್ವಭಾವಿ ಸಭೆಯನ್ನು ಭಂಡಾರಿ ಬೆಟ್ಟು, ಕಿನ್ನಿಬೆಟ್ಟು,ಕಾಯರ್ ಮಾರ್ ಪರಿಸರದ ಜನರು ಸೇರಿ ಸಭೆಯನ್ನು ನಡೆಸಿ 22/10/23 ಆದಿತ್ಯವಾರ 9:00 ಗಂಟೆಗೆ ಶ್ರಮದಾನ ಮುಖಾಂತರ ಅಭಿಯಾನ ಆರಂಭಿಸಲು ನಿರ್ಣಯ ತೆಗೆದುಕೊಳ್ಳಲಾಯಿತು.

ಚರ್ಚ್ ನ ಗುರುಗಳು ವಂದನೀಯ ವಲೇರಿಯನ್ ಡಿಸೋಜಾ, ಸ್ಥಳೀಯ ಆಮ್ಟಾಡಿ ಪಂಚಾಯತ್ ಅಧ್ಯಕ್ಷ ಶ್ರೀ ವಿಜಯ್ ಕುಮಾರ್, ಸದಸ್ಯರಾದ ಸುನಿಲ್ ಕುಮಾರ್, ನಿತ್ಯಾನಂದ ಸಾಲ್ಯಾನ್, ಆಲ್ವಿನ್ ಲೋಬೊ,ಸೈಮನ್ ಲೋಬೊ ಜೀವನ್ ಲೋಬೊ ವಲೇರಿಯನ್ ರೊಡ್ರಿಗಸ್ ಮನೋಹರ್ ಡಿಕೋಸ್ತಾ ಹಾಗೂ ಒಟ್ಟು 38 ಜನರು ಹಾಜರಿದ್ದರು.