ಗೆರಟೆಯಿಂದ ಮೂಡಿ ಬಂದ ಹುಲಿ ಮುಖವರ್ಣಿಕೆ
ಬಂಟ್ವಾಳ: ವೃತ್ತಿಯಲ್ಲಿ ಮೇಸ್ತ್ರೀ ,ಪ್ರವೃತ್ತಿಯಲ್ಲಿ ಅದ್ಬುತ ಕಲಾಕಾರ, ತೆಂಗಿನ ಗೆರಟೆಯ ಮೂಲಕ ಕಲಾ ಕೃತಿಗಳನ್ನು ತಯಾರಿಸುವ ಇರಾ ಗ್ರಾಮದ ಸಚೀಂದ್ರ ಅವರು ದಸರಾ ಹಬ್ಬದ ಸುಸಂದರ್ಭದಲ್ಲಿ ಗೆರಟೆಯಿಂದಲೇ ಆಕರ್ಷಕ ಹುಲಿ ಮುಖವರ್ಣಿಕೆಯನ್ನು ರಚಿಸಿದ್ದಾರೆ.

ತೆಂಗಿನ ಗೆರಟೆ, ಗೆರಟೆ ಹುಡಿ, ಅಂಟು ಬಳಸಿ ಹುಲಿ ಮುಖವಾಡ ರಚಿಸಿದ್ದಾರೆ. ಸುಮಾರು 17 ದಿನಗಳ ಪರಿಶ್ರಮದಿಂದ ಸುಂದರವಾದ ಘರ್ಜಿಸುವ ಹುಲಿ ಮುಖ ಸಿದ್ಧಗೊಂಡಿದೆ.

ವ್ಯರ್ಥ ವಾಗಿ ಹೋಗುವ ತೆಂಗಿನ ಗೆರಟೆಳನ್ನು ಬಳಸಿಕೊಂಡು ಆಕರ್ಷಕ ಕಲಾಕೃತಿಗಳನ್ನು ಸಚೀಂದ್ರ ಅವರು ರಚಿಸುತ್ತಿದ್ದು,ಇವರ ಕೈ ಚಳಕದಲ್ಲಿ ಗೆರಟೆಯ ಇರುವೆ, ದೀಪ, ಜಗ್ಗ್, ಹೂವಿನ ಕುಂಡ ಮೊದಲಾದ ಅಲಂಕಾರಿಕ ವಸ್ತುಗಳನ್ನು ರಚಿಸಿದ್ದಾರೆ.
ಇದೀಗ ಸಚೀಂದ್ರ ಅವರ ಕೈಚಳಕದಲ್ಲಿ ಪ್ರಥಮ ಬಾರಿಗೆ ಹುಲಿ ಮುಖವರ್ಣಿಕೆ ತಯಾರಾಗಿದ್ದು, ಜನರನ್ನು ತನ್ನತ್ತ ಸೆಳೆಯುತ್ತಿದೆ. ಇದಕ್ಕೆ 100 ಕ್ಕು ಅಧಿಕ ಗೆರಟೆಯನ್ನು ಬಳಸಲಾಗಿದೆ.
ಕೊರೋನಾ19 ರ ಲಾಕ್ ಡೌನ್ ಸಂದರ್ಭ ಬಿಡುವಿನ ವೇಳೆ ಮನೆಯಲ್ಲಿ ಗೆರಟೆಯಿಂದ ಕಲಾಕೃತಿಗಳನ್ನು ತಯಾರಿಸುವ ಹವ್ಯಾಸವನ್ನು ಬೆಳೆಸಿಕೊಂಡಿದ್ದ ಸಚೀಂದ್ರ ಅವರು ಬಳಿಕ ಇದನ್ನು ತನ್ನ ಕೆಲಸದ ಸಮಯದಲ್ಲು ಮುಂದುವರಿಸಿದ್ದಾರೆ.
ಸನ್ಮಾನ, ಹುಟ್ಟುಹಬ್ಬ, ಗೃಹಪ್ರವೇಶ ಮೊದಲಾದ ಕಾರ್ಯಕ್ರಮಗಳಿಗೆ ಇವರು ತಯಾರಿಸಿದ ಕಲಾಕೃತಿಯನ್ನೇ ಖರೀದಿಸಿ ಉಡುಗೋರೆಯಾಗಿ ನೀಡಲಾಗುತ್ತಿದೆ.