ಶ್ರೀ ರಾಜರಾಜೇಶ್ವರೀ ಸನ್ನಿಧಿಯಲ್ಲಿ ಲಲಿತಾ ಪಂಚಮಿಯ ವಿಶೇಷ
ಪೊಳಲಿ: ನವರಾತ್ರಿಯ ಐದನೇಯ ದಿನ ಅ.೧೯ ಗುರುವಾರದಂದು ಶ್ರೀ ರಾಜರಾಜೇಶ್ವರೀ ದೇವಸ್ಥಾನ ಪೊಳಲಿಯಲ್ಲಿ ನವರಾತ್ರಿ ಪೂಜೆ ಹಾಗೂ ಚಂಡಿಕಾಹೋಮ ನಡೆಯಲಿರುವುದು.
ಲಲಿತಾ ಪಂಚಮಿಯ ವಿಶೇಷ ದಿನದಂದು ರಾತ್ರಿ ಗಂಟೆ ೮:೦೦ರಿಂದ ೧೦:೦೦ರ ವರೆಗೆ ಶ್ರೀ ದೇವರಿಗೆ ಹರಕೆಯಾಗಿ ಬಂದ ಸೀರೆಯನ್ನು ೧೮ ವರ್ಷ ಮೇಲ್ಪಟ್ಟ ಸ್ತ್ರೀಯರಿಗೆ ಮಾತ್ರ ಪ್ರಸಾದ ರೂಪದಲ್ಲಿ ವಿತರಿಸಲಾಗುವುದು.
ಕಾರ್ಯಕ್ರಮಗಳು:
ಸಂಜೆ ೬:೦೦ರಿಂದ ಯಶಸ್ವಿನಿ ಉಳ್ಳಾಲ್ ಸ್ವರ ಮಾಧುರ್ಯ ಸಂಗೀತ ವಿದ್ಯಾಲಯ ಇವರಿಂದ ಸುಗಮ ಸಂಗೀತ,ದಾಸ ಕೀರ್ತನೆ,ಭಕ್ತಿ ಗಾಯನ,ಹಾಗೂ ದೇವರ ನಾಮಗಳು,ರಾತ್ರಿ ೮:೦೦ಗಂಟೆಯಿಂದ ೧೦:೦೦ರ ವರೆಗೆ ವಿದ್ವಾನ್ ಶ್ರೀ ಗಣರಾಜ್ ಭಟ್ ಬಂಟ್ವಾಳ ಮತ್ತು ಬಳಗದವರಿಂದ “ಶಾಸ್ತ್ರೀಯ ಸಂಗೀತ” ಕಾರ್ಯಕ್ರಮ ನಡೆಯಲಿರುವುದು.