ಪೊಳಲಿ ರಾಮಕೃಷ್ಣ ತಪೋವನದಲ್ಲಿ ಜಗನ್ಮಾತೆಯ ವಿಶೇಷ ಆರಾಧನೆ
ಕೈಕಂಬ: ರಾಮಕೃಷ್ಣ ತಪೋವನ ಪೊಳಲಿಯಲ್ಲಿ ಅ.24 ಮಂಗಳವಾರ ಜಗನ್ಮಾತೆಯ ಆರಾಧನೆಯೊಂದಿಗೆ ವಿಜಯದಶಮಿ ಆಚರಣೆಯು ಭಜನಾ ಸಂಕೀರ್ತನೆಯ ಮೂಲಕ ಸಂಪನ್ನಗೊಳ್ಳಲಿದೆ.

ಮಂಗಳವಾರ ಬೆಳಗ್ಗೆ 7:30ರಿಂದ 9:30ರ ವರೆಗೆ ದುರ್ಗಾ ಹೋಮ,9:30ರಿಂದ 11:30ರ ವರೆಗೆ ವೀರ ವಿಠಲ ವೆಂಕಟೇಶ ಭಜನಾ ಮಂಡಳಿ ಮಣಿಪಾಲ ಹಾಗೂ 11:30ರಿಂದ 12:30ರ ವರೆಗೆ ಸಾಕ್ಷಿ ಮತ್ತು ಬಳಗದಿಂದ ಭಜನಾ ಕರ‍್ಯಕ್ರಮ ನಡೆಯಲಿದೆ.ಮದ್ಯಾಹ್ನ 12:30ರಿಂದ 1:30ರ ವರೆಗೆ ಕುಮಾರಿ ಪೂಜೆ(ನವದುರ್ಗೆಯರಿಗೆ),ಆರತಿ ನಡೆಯಲಿದೆ.
ಅ.15ರಿಂದ ಅ.24 ರವರೆಗೆ ಪ್ರತಿ ನಿತ್ಯ ಬೆಳಗ್ಗೆ ಮತ್ತು ಸಂಜೆ ಜಿಲ್ಲೆಯ ವಿವಿಧ ಮಹಿಳಾ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಲಿದ್ದು,ಪ್ರತಿನಿತ್ಯ ಬೆಳಗ್ಗೆ 11:30ರಿಂದ 12:30ರ ವರೆಗೆ ನವದುರ್ಗೆಯ ಒಂದೊಂದು ರೂಪಕ್ಕೆ ಕುಮಾರಿ ಪೂಜೆ ಹಾಗೂ ಚಂಡೀ ಪಾರಾಯಣ ನಡೆಯಲಿದೆ.
ವಿಶೇಷ ಸೂಚನೆ: ಅ.21 ಶನಿವಾರದಂದು ನವರಾತ್ರಿ ಪ್ರಯುಕ್ತ ರಾಮಕೃಷ್ಣ ತಪೋವನ ಯಕ್ಷಗಾನ ಕೇಂದ್ರದ ಮಕ್ಕಳಿಂದ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ರಾತ್ರಿ 8:00ರಿಂದ 12:00ಗಂಟೆಯ ವರೆಗೆ “ಷಣ್ಮುಖ ವಿಜಯ”ಹಾಗೂ“ರತಿ ಕಲ್ಯಾಣ” ಎಂಬ ಯಕ್ಷಗಾನ ನಡೆಯಲಿರುವುದು.