೨೮ನೇ ವರ್ಷದ ಪೊಳಲಿ ಯಕ್ಷೋತ್ಸವ; ಹಿರಿಯ ಕಲಾವಿದರಿಗೆ ಸನ್ಮಾನ,ಯಕ್ಷೋತ್ಸವ ಪ್ರಶಸ್ತಿ ಪ್ರದಾನ
ಕೈಕಂಬ: ಶ್ರೀ ರಾಜರಾಜೇಶ್ವರೀ ದೇವಸ್ಥಾನ ಪೊಳಲಿಯಲ್ಲಿ ಅ.೧೪ ಶನಿವಾರದಂದು ಯಕ್ಷಕಲಾ ಪೊಳಲಿ ಇದರ ೨೮ನೇ
ವರ್ಷದ ವರ್ಧಂತಿ ಉತ್ಸವ ನಡೆಯಲಿದ್ದು,ಈ ಸಂದರ್ಭದಲ್ಲಿ ಪ್ರಸಂಗ ಕರ್ತ,ಯಕ್ಷಗಾನ ಕಲಾವಿದ,ನಿರೂಪಕ ಕದ್ರಿ ನವನೀತ ಶೆಟ್ಟಿ ಇವರಿಗೆ “ಪೊಳಲಿ ಯಕ್ಷೋತ್ಸವ ಪ್ರಶಸ್ತಿ-೨೦೨೩” ಹಾಗೂ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಪ್ರತಿಷ್ಠಿತ ಸಂಸ್ಥೆಗಳಾದ ಸುವರ್ಣ ಪ್ರತಿಷ್ಠಾನ ಕರ್ನಿಕೆ ಮತ್ತು ಯಕ್ಷದೇವ ಮಿತ್ರ ಕಲಾ ಮಂಡಳಿ ಬೆಳುವಾಯಿ ಸಂಸ್ಥೆಗಳನ್ನು ಗೌರವಿಸಲಾಗುವುದು.
ಯಕ್ಷಗಾನ ಕಲಾ ರಂಗಕ್ಕೆ ಅಮೂಲ್ಯ ಸೇವೆ ಸಲ್ಲಿಸಿದ ಹಿರಿಯ ಹಾಗೂ ಪ್ರಸಿದ್ಧ ಕಲಾವಿದರಾದ ಡಿ.ಮನೋಹರ ಕುಮಾರ್,ಸೀತಾರಾಮ ಕಟೀಲು,ಗುಂಡಿ ಮಜಲು ಗೋಪಾಲ ಕೃಷ್ಣ ಭಟ್,ಸದಾಶಿವ ಶೆಟ್ಟಿಗಾರ್ ಸಿದ್ದಕಟ್ಟೆ,ಸುಬ್ಬಣ್ಣಕೋಡಿ ರಾಮ್ ಭಟ್,ಡಾ.ವಾದಿರಾಜ ಕಲ್ಲೂರಾಯ ಕಿನ್ನಿಕಂಬಳ ಹಾಗೂ ವಿಷ್ಣು ಶರ್ಮ ವಾಟೆಪಡ್ಪು ಇವರನ್ನು ಸನ್ಮಾನಿಸಲಾಗುವುದು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶನಿವಾರ ಸಂಜೆ ೬ರಿಂದ ಮರುದಿನ ಬೆಳಗ್ಗೆ ೬ವರೆಗೆ ಜಿಲ್ಲೆಯ ಪ್ರಸಿದ್ಧ ಯಕ್ಷ ಕಲಾವಿದರಿಂದ ಅಭಿನವ ವಾಲ್ಮೀಕಿ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ವಿರಚಿತ “ನಳಿನಾಕ್ಷಿ ನಂದನೆ” ಹಾಗೂ ನರಸಿಂಹ ಶಾಸ್ತ್ರಿ ವಿರಚಿತ “ಅಂಬಾ ಶಪಥ” ಎಂಬ ಯಕ್ಷಗಾನ ಬಯಲಾಟ ನಡೆಯಲಿರುವುದು ಎಂದು ಸಂಸ್ಥಾಪಕ ಅ ನ ಭ ಪೊಳಲಿ,ಸಂಚಾಲಕ ವೆಂಕಟೇಶ್ ನಾವಡ ಪೊಳಲಿ,ಸಂಘಟಕ ಬಿ.ಜನಾರ್ಧನ ಅಮ್ಮುಂಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.