ಶ್ರೀ ಆದಿಶಕ್ತಿ ಚಾಮುಂಡೇಶ್ವರೀ ದೇವಸ್ಥಾನ ಬಡಗಬೆಳ್ಳೂರಿನಲ್ಲಿ ನವರಾತ್ರಿ ಮಹೋತ್ಸವ ಹಾಗೂ ಶಾರದಾ ಪ್ರತಿಷ್ಠೆ
ಕೈಕಂಬ: ಬಡಗಬೆಳ್ಳೂರಿನ ಶ್ರೀ ಆದಿಶಕ್ತಿ ಚಾಮುಂಡೇಶ್ವರೀ ದೇವಳದಲ್ಲಿ ಅ.೧೫ರಿಂದ ೨೪ರ ಮಂಗಳವಾರದವರೆಗೆ ನವರಾತ್ರಿ ಮಹೋತ್ಸವ ನಡೆಯಲಿರುವುದು.

ಅ.೧೫ರಂದು ಭಾನುವಾರ ಬೆಳಿಗ್ಗೆ ೭:೦೦ ಗಂಟೆಗೆ “ತೆನೆ ಹಬ್ಬ“,ಕಲಶ ಪ್ರತಿಷ್ಠೆ,ನವರಾತ್ರಿ ಪೂಜೆ,ನಾಗತಂಬಿಲ,ಚಂಡಿಕಾಹೋಮ,ಮದ್ಯಾಹ್ನ ಮಹಾಪೂಜೆ,ಅನ್ನಸಂತರ್ಪಣೆ ನಡೆಯಲಿರುವುದು.
ಅ.೨೦ರಂದು ಶುಕ್ರವಾರ ಶಾರದಾ ಮಂಟಪದಲ್ಲಿ “ಶಾರದಾ ಪ್ರತಿಷ್ಠೆ” ಹಾಗೂ ಶಾರದಾ ಪೂಜೆ ನೆಡೆಯಲಿರುವುದು,ಶಾರದಾ ಮಾತೆಯ ವಿಗ್ರಹದ ಸೇವಾರ್ಥಿಗಳು ಗೀತಾ ದೇವದಾಸ್ ಸುವರ್ಣ ಮತ್ತು ಮಕ್ಕಳು ಶಿವನಗರ,೧೭ರಂದು ಮಂಗಳವಾರ ರಾತ್ರಿ ೧೦:೦೦ಗಂಟೆಗೆ ಕಲ್ಲುರ್ಟಿ,ಮಂತ್ರದೇವತೆ ಕೋಲ ನಡೆಯಲಿರುವುದು.
“ದಶ ಚಂಡಿಕಾಹೋಮ“ನವರಾತ್ರಿ ಮಹೋತ್ಸವದಲ್ಲಿ ಪ್ರತಿನಿತ್ಯ ಭಕ್ತಾದಿಗಳಿಂದ ಚಂಡಿಕಾಹೋಮ ನಡೆಯುವುದು.ನವರಾತ್ರಿ ಮಹೋತ್ಸವದ ಕಾರ್ಯಕ್ರಮಗಳು:
ಪ್ರತಿದಿನ ಸಂಜೆ ೬:೩೦ರಿಂದ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ.
ಭಾನುವಾರ ರಾತ್ರಿ ೯:೦೦ಗಂಟೆಯಿಂದ ಇಂಚರ ಮೆಲೋಡೀಸ್ ಸುಂಕದಕಟ್ಟೆ ಬಜಪೆ ವಿನಯ್ ಕುಮಾರ್ ಅದ್ಯಪಾಡಿ ಮತ್ತು ಬಳಗದವರಿಂದ “ಸಂಗೀತ ರಸಮಂಜರಿ“,೧೦:೦೦ ಗಂಟೆಯಿಂದ ಜೈ ವೀರ ಮಾರುತಿ ವ್ಯಾಯಾಮ ಶಾಲೆ ಬಡಗಬೆಳ್ಳೂರು ಪ್ರಾಯೋಜಕತ್ವದ ತೆಲಿಕೆದ ಬೊಳ್ಳಿ ಡಾ. ದೇವದಾಸ್ ಕಾಪಿಕಾಡ್ ರಚಿಸಿ,ನಟಿಸಿ,ನಿರ್ದೇಶಿಸಿರುವ ಭೋಜರಾಜ್ ವಾಮಂಜೂರು ಹಾಗೂ ಅರವಿಂದ್ ಬೋಳಾರ್ ಸಮಾಗಮದ ಈ ವರ್ಷದ ನೂತನ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ.
ಬುಧವಾರ ರಾತ್ರಿ ೯:೦೦ ಗಂಟೆಯಿಂದ ಸುಕನ್ಯಾ ಶಿವಪ್ರಸಾದ್ ಆಚಾರ್ಯ ಕಾಗುಡ್ಡೆ,ವಿಶ್ವಕರ್ಮ ಬಳಗ ಬೆಳ್ಳೂರು ಪ್ರಾಯೋಜಕತ್ವದ ಯಕ್ಷ ಬಳಗ ಉಪ್ಪಿನಂಗಡಿ,ಸತೀಶ್ ಆಚಾರ್ಯ ಮಾಣಿ ವಿರಚಿತ “ಗೋವಿಂದ ಗೋಪಾಲ” ತುಳು ಯಕ್ಷಗಾನ.
ಶನಿವಾರ ಮದ್ಯಾಹ್ನ ೨:೦೦ಗಂಟೆಗೆ ಶ್ರೀ ಪೊಳಲಿ ಯಕ್ಷಗಾನ ಮಂಡಳಿ ಪೊಳಲಿ ಇವರಿಂದ “ಯಕ್ಷಗಾನ ತಾಳಮದ್ದಳೆ“,ರಾತ್ರಿ ಗಂಟೆ ೮:೦೦ರಿಂದ ದೀನಬಂಧು ಸಮಾಜ ಸೇವಾ ಸಂಸ್ಥೆ,ಬಡಗಬೆಳ್ಳೂರು ಸಂಯೋಜನೆಯ ಶ್ರೀ ಶಾರದ ಅಂಧರ ಗೀತ ಗಾಯನ ಕಲಾ ಸಂಘ(ರಿ) ಇವರಿಂದ “ಸಂಗೀತ ರಸಮಂಜರಿ“,ತದನಂತರ ಸ್ಥಳೀಯ ಪ್ರತಿಭೆಗಳಿಂದ ವೈವಿದ್ಯಮಯ ನೃತ್ಯ ಕಾರ್ಯಕ್ರಮ.
ಭಾನುವಾರ ಮದ್ಯಾಹ್ನ ೨:೦೦ ಗಂಟೆಗೆ ಶ್ರೀ ರಾಮಾಂಜನೇಯ ಕೃಪಾಪೋಷಿತ ಯಕ್ಷಗಾನ ಮಂಡಳಿ ಮಳಲಿ ಇವರಿಂದ “ಯಕ್ಷಗಾನ ತಾಳಮದ್ದಳೆ“,ಸಂಜೆ ಗಂಟೆ ೬:೦೦ರಿಂದ ಶ್ರೀ ಕಾವೇಶ್ವರ ಯಕ್ಷಗಾನ ಮಂಡಳಿ(ರಿ) ಬೆಳ್ಳೂರು ಇದರ ಯುವ ಕಲಾವಿದರಿಂದ ದೇವದಾಸ್ ಅರ್ಕುಳ ಇವರ ನಿರ್ದೇಶನದಲ್ಲಿ ಪುಷ್ಪರಾಜ್ ಶೆಟ್ಟಿ ಯವರ ಸಾರಥ್ಯದಲ್ಲಿ “ನರ-ಶಾರ್ದೂಲ” ಯಕ್ಷಗಾನ ಬಯಲಾಟ.
೨೩ರಂದು ಸೋಮವಾರ ಬೆಳಗ್ಗೆ ೬:೩೦ರಿಂದ ಜೈ ವೀರ ಮಾರುತಿ ವ್ಯಾಯಾಮ ಶಾಲೆ ಬಡಗಬೆಳ್ಳೂರು ಇದರ ಸಭಾಂಗಣದಲ್ಲಿ ಆಯುಧ ಪೂಜೆ ಮತ್ತು ಗಣಹೋಮ,ರಾತ್ರಿ ಗಂಟೆ ೧೦:೦೦ರಿಂದ ಡಿ.ಮಾಧವ ಬಂಗೇರ ಸಂಯೋಜನೆಯ,ವಿಶ್ವನಾಥ ಪೂಜಾರಿ ನಡೈಡಿ ಬೆಟ್ಟು ಸಹಕಾರದ ಜಿಲ್ಲೆಯ ಸುಪ್ರಸಿದ್ಧ ಅತಿಥಿ ಕಲಾವಿದರ ಸಮಾಗಮದಲ್ಲಿ “ಶ್ರೀಮತಿ ಪರಿಣಯ“,”ಚೂಡಾಮಣಿ-ಲಂಕಾದಹನ“,”ರಾಮಾಂಜನೇಯ” ಎಂಬ ಯಕ್ಷಗಾನ ಬಯಲಾಟ ನಡೆಯಲಿರುವುದು.
೨೫ರಂದು ಮಂಗಳವಾರ “ಕಳಶ ವಿಸರ್ಜನೆ”,ಸಂಜೆ ಗಂಟೆ ೬:೦೦ರಿಂದ ಜೈ ವೀರಮಾರುತಿ ವ್ಯಾಯಾಮ ಶಾಲೆ ಇವರಿಂದ “ತಾಲೀಮು” ಪ್ರದರ್ಶನ,ಶ್ರೀ ಆದಿಶಕ್ತಿ ಕುಣಿತ ಭಜನಾ ಮಂಡಳಿಯವರಿಂದ ಕುಣಿತ ಭಜನೆ ಹಾಗೂ ವಿವಿಧ ವೇಷ ವಿನೋದಾವಳಿಗಳೊಂದಿಗೆ ಶಾರಾದಾ ಮಾತೆಯ ಶೋಭಾಯಾತ್ರೆ ದೇವಸ್ಥಾನದಿಂದ ಹೊರಟು ಕೊಳತ್ತಮಜಲು ಎಕ್ಕುಂದ ಮಾರ್ಗವಾಗಿ ಫಲ್ಗುಣಿ ನದಿಯಲ್ಲಿ ಶಾರದಾ ಮಾತೆಯ ವಿಗ್ರಹ ವಿಸರ್ಜಿಸಲಾಗುವುದು.