ಕೈಕಂಬ: ಭಾರತ್‌ ಕೋ ಆಪರೇಟಿವ್‌ ಬ್ಯಾಂಕ್‌ ಮುಂಬೈ ಲಿಮಿಟೆಡ್‌ ಇದರ ನಿರ್ದೇಶಕರಾಗಿ ಬೆಳ್ಳೂರು ಮೂಲದ ಮುಂಬೈ ಉದ್ಯಮಿ ಗಂಗಾಧರ ಪೂಜಾರಿ ಆಯ್ಕೆಯಾಗಿದ್ದಾರೆ.

ಗಂಗಾಧರ ಪೂಜಾರಿಯವರು ಬೆಳ್ಳೂರು ಪಂಚಗ್ರಾಮದ ಬಿಲ್ಲವರ ಸಮಾಜ ಸೇವಾ ಸಂಘದ ಸ್ಥಾಪಕಾಧ್ಯಕ್ಷರಾಗಿ,ಮುಂಬೈ ಕಾಂದಿವಲಿ ಯ ಬಿಲ್ಲವ ಅಸೋಸಿಯೇಷನ್ ಮಾಜಿ ಅಧ್ಯಕ್ಷರಾಗಿ,ಬೆಳ್ಳೂರು ಕಾವೇಶ್ವರದ ವ್ಯವಸ್ಥಾಪಕ ಸದಸ್ಯರಾಗಿ ಹಲವು ವರ್ಷಗಳಿಂದ ಮುಂಬೈ ಹಾಗೂ ಕರ್ನಾಟಕದಲ್ಲಿ ಉದ್ಯಮ ನಡೆಸುತ್ತಿದ್ದ ಅವರು ಧಾರ್ಮಿಕ ಕ್ಷೇತ್ರದಲ್ಲಿಯೂ ತನ್ನನ್ನು ತೊಡಗಿಸಿಕೊಂಡಿದ್ದಾರೆ.

ಭಾರತ್‌ ಬ್ಯಾಂಕ್‌ ನ ಸ್ಥಾಪಕಾಧ್ಯಕ್ಷ ಜಯ ಸಿ. ಸುವರ್ಣರೊಂದಿಗೆ ಆತ್ಮೀಯರಾಗಿದ್ದರು. ಭಾರತ್‌ ಕೋ ಆಪರೇಟಿವ್‌ ಬ್ಯಾಂಕ್‌ ಮುಂಬೈ ಲಿಮಿಟೆಡ್‌ ಇಲ್ಲಿ ಹತ್ತು ವರ್ಷಗಳಲ್ಲಿ ನಿರ್ದೇಶಕರಾಗಿದ್ದ ಅವರು ಪುನರ್‌ ಆಯ್ಕೆಯಾಗಿದ್ದಾರೆ.

By suddi9

Leave a Reply

Your email address will not be published. Required fields are marked *