ಬಂಟ್ವಾಳ: ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಅವರು ಮಂಗಳೂರಿಗೆ ಕುಡಿಯುವ ನೀರಿನ ಸಲುವಾಗಿ ನೇತ್ರಾವತಿಯಲ್ಲಿ 6.50 ಮೀಟರ್ ನೀರು ಸಂಗ್ರಹಿಸಲಾಗಿದ್ದು ಈ ಬಾರಿ ನೀರಿನ ಕೊರತೆ ಆಗದು ಎಂಬ ಹೇಳಿಕೆಯನ್ನು ಮಾಧ್ಯಮಗಳ ಮೂಲಕ ನೀಡಿದ್ದಾರೆ.

ಜಿಲ್ಲಾಡಳಿತ ನೀರು ಸಂಗ್ರಹದ ನಿಮಿತ್ತ ಸಂತ್ರಸ್ತ ರೈತರಿಗೆ 6 ಮೀಟರ್ ಗೆ ಭೂ ಪರಿಹಾರ ಒದಗಿಸಿದ್ದು,ಆದರೆ ಎಲ್ಲಾ ರೈತರಿಗೆ ಇನ್ನೂ ದೊರೆತಿರುವುದಿಲ್ಲ,ಪ್ರಸ್ತುತ ಆರುವರೆ ಮೀ. ಗೆ ನೀರು ಸಂಗ್ರಹಿಸಿದ್ದು ಕೇಂದ್ರ ಜಲ ಆಯೋಗದ ನಿರ್ದೇಶನದಂತೆ ವರತೆ ಪ್ರದೇಶ ಸೇರಿಸಿ ನೀರು ಸಂಗ್ರಹಕ್ಕೆ1 ಮೀಟರ್ ಹೆಚ್ಚುವರಿಯಾಗಿ ಅಂದರೆ ಏಳುವರೆ ಮೀಟರ್ ಗೆ ರೈತರ ಸಮಕ್ಷಮ ಸರ್ವೇ ಮಾಡಿ ಸಂತ್ರಸ್ಥ ರೈತರಿಗೆ  ಸೂಕ್ತ ಪರಿಹಾರ  ಜಿಲ್ಲಾಡಳಿತದ ಮೂಲಕ ಒದಗಿಸಿಕೊಡುವಂತೆ ಸಜಿಪ ಮುನ್ನೂರು ಗ್ರಾಮ ಪಂಚಾಯಿತಿ ಪಿಡಿಒ ಲಕ್ಷ್ಮಣ್ ಅವರ ಮೂಲಕ ಬಂಟ್ವಾಳ ತಾಲೂಕು ರೈತ ಸಂಘ ಅಧ್ಯಕ್ಷ ಎo ಸುಬ್ರಹ್ಮಣ್ಯ ಭಟ್ ನೇತೃತ್ವದ ನಿಯೋಗ ಮನವಿ ಸಲ್ಲಿಸಿದೆ.

ಈ ನಿಯೋಗದಲ್ಲಿ ಎನ್ .ಕೆ.ಇದಿನಬ್ಬ,ಅಬ್ದುಲ್ ಖಾದರ್,ಎನ್ .ರಾಮ,ಹುಸೇನಾರ್‌,ಬಿ.ಅಣ್ಣಪ್ಪಯ್ಯ,ಅಬ್ಬಾಸ್ ಮೊದಲಾದವರಿದ್ದರು. 

By suddi9

Leave a Reply

Your email address will not be published. Required fields are marked *