Published On: Mon, Oct 2nd, 2023

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ೨೨ನೇ ವರ್ಷದ ನವದಂಪತಿ ಸಮಾವೇಶ

ಬಂಟ್ವಾಳ: ನೂತನವಾಗಿ ಗೃಹಸ್ಥಾಶ್ರಮವನ್ನು ಪ್ರವೇಶಿಸಿದ  ನವದಂಪತಿಗಳ ಸಮಾವೇಶವು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ವೇದವ್ಯಾಸ ಧ್ಯಾನ ಮಂದಿರದಲ್ಲಿ ನಡೆಯಿತು. ಹಿರಿಯ ದಂಪತಿಗಳಾದ ಪ್ರೊ. ಗಣಪತಿ ಭಟ್ ಕುಳಮರ್ವ , ವಸಂತಿ ದಂಪತಿಗಳು ತುಳಸಿ ಗಿಡಕ್ಕೆ ನೀರು ಹಾಕುವ ಮೂಲಕ ನವದಂಪತಿ ಸಮಾವೇಶವನ್ನು ಉದ್ಘಾಟಿಸಿ, ತಾವು ವೈವಾಹಿಕ ಜೀವನದಲ್ಲಿ ನಡೆದು ಬಂದ ಜೀವನದ ಅನುಭವವನ್ನು ಹಂಚಿಕೊಂಡು ಶುಭ ಹಾರೈಸಿದರು. 

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಶಾಲೆಗೆ ಬರುವ ಮಕ್ಕಳಲ್ಲಿ ನಮ್ಮ ದೇಶ, ಧರ್ಮ, ಸಂಸ್ಕೃತಿ, ಜೀವನ ಮೌಲ್ಯಗಳನ್ನು ಬಿಂಬಿಸಬೇಕೆನ್ನುವಂತ ಹಿನ್ನೆಲೆಯಲ್ಲಿ ಪ್ರಾರಂಭಗೊಂಡ ಸಂಸ್ಥೆಯಾಗಿದೆ,ಸಮಾಜದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಈ ಕಾರ‍್ಯಕ್ರಮವನ್ನು ಸಂಸ್ಥೆಯ ವತಿಯಿಂದಾಯೋಜಿಸಲಾಗಿದೆ ಎಂದರು. 

ಕುಟುಂಬ ಪ್ರಭೋದನ್ ಪ್ರಮುಖರಾದ ಗಜಾನನ ಪೈಯವರು ದೀಪ ಬೆಳಗಿಸಿ ಕಾರ‍್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ನಮ್ಮ ಕುಟುಂಬ ಪದ್ಧತಿಯಲ್ಲಿ ಅವಿಭಕ್ತ ಕುಟುಂಬಗಳಿತ್ತು. ನಮ್ಮ ವಿಧಿಗಳು ಸಂಸ್ಕಾರಗಳಲ್ಲಿ ಬೇರೆ ಬೇರೆ ಇರುತ್ತದೆ. ಸಾಮಾನ್ಯವಾಗಿ ಮದುವೆಯ ಕಾರ‍್ಯಕ್ರಮದಲ್ಲಿ ಸಪ್ತಪದಿ ಎಂಬ ಕಾರ‍್ಯಕ್ರಮ ಇರುತ್ತದೆ. ನಮ್ಮ ಕುಟುಂಬ ಪದ್ದತಿಗಳು ಹೇಗೆ ಇರಬೇಕು ಎಂದು ಮಾರ್ಗದರ್ಶನಗೈದರು.

ಸಾರ್ಥಕ ಜೀವನ ಸಾಗಿಸಿ:

ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾದ ಸು.ರಾಮಣ್ಣ ನವದಂಪತಿ ಸಮಾವೇಶದ ಸಮಾರೋಪ ಭಾಷಣಗೈದು ನಮ್ಮ ಕುಟುಂಬವನ್ನು ನಾವು ರಕ್ಷಿಸಿದರೆ ನಮ್ಮ ಕುಟುಂಬವು ನಮ್ಮನ್ನು ರಕ್ಷಿಸುತ್ತದೆ. ನಮ್ಮ ಜೀವನವನ್ನು ಯೋಗ್ಯವಾದಂತಹ ದಿಕ್ಕಿನಲ್ಲಿ ಸಾರ್ಥಕವಾದ ಜೀವನ ಸಾಗಿಸುವುದು ಉತ್ತಮ ಎಂದರು.

ಆಗಮಿಸಿದ ಎಲ್ಲಾ ನವದಂಪತಿಗಳಿಗೆ ಮಾತೆಯರು ಕಾಲಿಗೆ ನೀರು ಹಾಕಿ ತೊಳೆದು, ಆರತಿ ಬೆಳಗಿ, ಅರಶಿನ, ಕುಂಕುಮ ಹಚ್ಚಿ ಸ್ವಾಗತಿಸಿದರು. ಎಲ್ಲಾ ನವದಂಪತಿಗಳು ಘೃತಾಹುತಿ ಅರ್ಪಿಸಿ ಶಿಶುಮಂದಿರದ ಗುಹೆಯ ಮೂಲಕ ವೇದಘೋಷದೊಂದಿಗೆ ಸಭಾಂಗಣ ಪ್ರವೇಶಿಸಿದರು.ಸಭಾಂಗಣವನ್ನು  ತಳಿರು, ತೋರಣಗಳಿಂದ ಅಲಂಕರಿಸಲಾಗಿತ್ತು. 

 ವಿದ್ಯಾಕೇಂದ್ರದ ಅಧ್ಯಕ್ಷರಾದ ಬಿ. ನಾರಾಯಣ ಸೋಮಯಾಜಿ, ಸಹಸಂಚಾಲಕರಾದ ರಮೇಶ್ ಎನ್, ಡಾ. ಕಮಲಾ ಪ್ರಭಾಕರ ಭಟ್, ಸುಬ್ರಾಯ ನಂದೋಡಿ, ಎಲ್ಲಾ ವಿಭಾಗದ ಪ್ರಮುಖರು ಹಾಗೂ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.ಶಿಶುಮಂದಿರದ ಮಾತೆಯರು  ಸ್ವಯಂಸೇವಕರಾಗಿ ಕಾರ‍್ಯ ನಿರ್ವಹಿಸಿದರು, ಒಟ್ಟು ೭೭ ಜೋಡಿ ದಂಪತಿಗಳು ಉಪಸ್ಥಿತರಿದ್ದರು.

 ನವ್ಯ ಪ್ರಾರ್ಥಿಸಿದರು. ಚೈತ್ರ ಮಾತಾಜಿ ಸ್ವಾಗತಿಸಿ, ರೂಪಕಲಾ ಮಾತಾಜಿ ವಂದಿಸಿದರು,  ಮಂಜುಳಾ ಕಾರ್ಯಕ್ರಮ ನಿರೂಪಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter