ರಾಯಿ: ರಿಕ್ಷಾ ತಂಗುದಾಣ ಶಾಸಕರಿಂದ ಲೋಕಾರ್ಪಣೆ,ಮೂಲ ಸೌಕರ್ಯಕ್ಕೆ ಆದ್ಯತೆ: ಶಾಸಕ ರಾಜೇಶ್ ನಾಯ್ಕ್
ಬಂಟ್ವಾಳ: ತಾಲೂಕಿನ ವಿವಿಧೆಡೆ ಈಗಾಗಲೇ ರಿಕ್ಷಾ ತಂಗುದಾಣ ನಿರ್ಮಿಸಲು ಹೆಚ್ಚಿನ ಒತ್ತು ನೀಡಲಾಗಿದ್ದು,ಗ್ರಾಮೀಣ ಪ್ರದೇಶವಾದ ರಾಯಿಯಲ್ಲಿ ಕೂಡಾ ಸುಸಜ್ಜಿತ ರಿಕ್ಷಾ ತಂಗುದಾಣ ಲೋಕಾರ್ಪಣೆ ಗೊಂಡು ರಿಕ್ಷಾ ಚಾಲಕರಿಗೆ ಮೂಲಭೂತ ಸೌಕರ್ಯ ಒದಗಿಸಲು ಆದ್ಯತೆ ನೀಡಲಾಗಿದೆ ಎಂದು ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಹೇಳಿದ್ದಾರೆ.

ಬಂಟ್ವಾಳ ತಾಲೂಕಿನ ರಾಯಿ ಪೇಟೆಯಲ್ಲಿ ಬಿಎಂಎಸ್ ರಿಕ್ಷಾ ಚಾಲಕ ಮಾಲಕರ ಸಂಘಕ್ಕೆ ನಿರ್ಮಾಣಗೊಂಡ ನೂತನ ತಂಗುದಾಣ ಭಾನುವಾರ ಲೋಕಾರ್ಪಣೆ ಗೊಳಿಸಿ ಅವರು ಮಾತನಾಡಿದರು.ರಾಯಿ ಗ್ರಾಮ ಪಂಚಾಯತ್ ನ ಅಧ್ಯಕ್ಷ ಸಂತೋಷ್ ಕುಮಾರ್ ಬೆಟ್ಟು ಅಧ್ಯಕ್ಷತೆ ವಹಿಸಿದ್ದರು.

ರಾಯಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಗುಣವತಿ ರಾಜೇಶ್,ಬಂಟ್ವಾಳ ಬಿಎಂಎಸ್ ರಿಕ್ಷಾ ಚಾಲಕ -ಮಾಲಕರ ಸಂಘದ ಅಧ್ಯಕ್ಷ ವಿಶ್ವನಾಥ್ ಚೆಂಡ್ತಿಮಾರ್,ಜಿಲ್ಲಾ ಬಿಎಂಎಸ್ ಸಂಘಟನಾ ಕಾರ್ಯದರ್ಶಿ ವಸಂತ ಕುಮಾರ್ ಮಣಿಹಳ್ಳ,ಜಿಲ್ಲಾ ಮೋಟಾರ್ ಎಂಡ್ ಜನರಲ್ ಮಜ್ದೂರ್ ಸಂಘದ ಉಪಾಧ್ಯಕ್ಷ ನಾರಾಯಣ ಪೂಜಾರಿ,ರಾಯಿ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ರಶ್ಮಿತ್ ಶೆಟ್ಟಿ ಕೈತ್ರೋಡಿ ಉಪಸ್ಥಿತರಿದ್ದರು.

ರಾಯಿ ರಿಕ್ಷಾ ಚಾಲಕ- ಮಾಲೀಕರ ಸಂಘದ ಅಧ್ಯಕ್ಷ ವಿಜಯ ಸಪಲ್ಯ ಸಹಿತ ಪದಾಧಿಕಾರಿಗಳು ಮತ್ತು ಗ್ರಾಮ ಪಂಚಾಯತ್ ಸದಸ್ಯರು ಇದ್ದರು.
ಇದೇ ವೇಳೆ ಹಿರಿಯ ಉದ್ಯಮಿ ಆರ್.ಕೇಶವ ಪೈ,ಕೊರಗಜ್ಜ ಕ್ಷೇತ್ರದ ಧರ್ಮದರ್ಶಿ ಲೋಕೇಶ ಕೈತ್ರೋಡಿ,ನಾಟಿ ವೈದ್ಯೆ ಶಾಂತಾ ಮಾಬೆಟ್ಟು, ಚೆಲುವಮ್ಮ ಶಾಂತಿ ಪಲ್ಕೆ,ಸಂಕಮ್ಮ ಗೌಡ ಇವರನ್ನು ಸನ್ಮಾನಿಸಲಾಯಿತು.

ಸಂಘದ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ರಾಯಿ ಸ್ವಾಗತಿಸಿದರು.ಸಮಿತ್ ಶಿವನಗರ ವಂದಿಸಿ,ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮದ ಪ್ರಯುಕ್ತ ರಾಯಿ ಪರಿಸರದಲ್ಲಿ ಸ್ವಚ್ಚತಾ ಕಾರ್ಯ ನಡೆಯಿತು.
ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ಖುದ್ದು ಸ್ವಚ್ಚತಾ ಕಾರ್ಯಕ್ಕೆ ಸಾಥ್ ನೀಡಿದರು.ರಾಯಿ ಗ್ರಾ.ಪಂ.ಅಧ್ಯಕ್ಷ ಸಂತೋಷ್ ಕುಮಾರ್ ಬೆಟ್ಟು, ಉಪಾಧ್ಯಕ್ಷೆ ಗುಣವತಿ ರಾಜೇಶ್ ಸಹಿತ ಪಂಚಾಯತ್ ಸದಸ್ಯರು,ಸ್ಥಳೀಯರು ಭಾಗವಹಿಸಿದ್ದರು.ಇದೇ ವೇಳೆ ಸ್ವಚ್ಚತಾ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.