ಕಲ್ಲಡ್ಕ : “ದೀನದಯಾಳರ ಆರ್ಥಿಕ ದೃಷ್ಟಿ” ವಿಶೇಷ ಉಪನ್ಯಾಸ
ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪದವಿ ಕಾಲೇಜಿನಲ್ಲಿ ಮಾನವಿಕ ಸಂಘ ಹಾಗೂ ವಾಣಿಜ್ಯ ಸಂಘದ ಸಹಯೋಗದಲ್ಲಿ ಸ್ವದೇಶಿ ಸಪ್ತಾಹದ ಪ್ರಯುಕ್ತ “ದೀನದಯಾಳರ ಆರ್ಥಿಕ ದೃಷ್ಟಿ” ಎಂಬ ವಿಚಾರದ ಕುರಿತಾಗಿ ಉಪನ್ಯಾಸ ಕಾರ್ಯಕ್ರಮವನ್ನು ನಡೆಸಲಾಯಿತು.

ಶ್ರೀರಾಮ ಪ್ರೌಢಶಾಲೆಯ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ರಾಧಾಕೃಷ್ಣ ಅಡ್ಯಂತಾಯ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಸ್ವದೇಶಿ ಸಪ್ತಾಹದ ಪರಿಕಲ್ಪನೆ,ಹಿನ್ನೆಲೆ ಹಾಗೂ ಸ್ವದೇಶಿ ಆರ್ಥಿಕ ಬೆಳವಣಿಗೆಗೆ ದೇಶದ ಪ್ರಜೆಗಳಾಗಿ ನಮ್ಮ ಜವಾಬ್ದಾರಿಯ ಕುರಿತು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ವಹಿಸಿದ್ದರು.ಆಡಳಿತ ಮಂಡಳಿ ಸದಸ್ಯ ನಾಗೇಶ್,ಮಾನವಿಕ ಸಂಘದ ನಿರ್ದೇಶಕ ಗಂಧರ್ವ ಹಾಗೂ ವಾಣಿಜ್ಯ ಸಂಘದ ನಿರ್ದೇಶಕ ಹರ್ಷಿತ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಶ್ರದ್ಧಾ ಸ್ವಾಗತಿಸಿ,ಸಿಂಚನ ವಂದಿಸಿದರು.ವಾಣಿಜ್ಯ ಸಂಘದ ಉಪಾಧ್ಯಕ್ಷೆ ಚೈತ್ರಾ ಕಾರ್ಯಕ್ರಮ ನಿರೂಪಿಸಿದರು.