ಸ್ವದೇಶಿ ಸಪ್ತಾಹದ ಪ್ರಯುಕ್ತ ದೇಶಿಯ ಭೋಜನ
ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪದವಿ ಕಾಲೇಜು ಆಯೋಜಿಸಿದ ದೇಶಿಯ ಭೋಜನ ಎಂಬ ಕಾರ್ಯಕ್ರಮ ಸಂಪನ್ನಗೊಂಡಿತು.ಸ್ವದೇಶಿ ಸಪ್ತಾಹ ಆಚರಣೆಯ ಅಂಗವಾಗಿ ವಿದ್ಯಾರ್ಥಿಗಳೇ ಮಧ್ಯಾಹ್ನದ ಭೋಜನವನ್ನು ಸಿದ್ಧಪಡಿಸಿ ಉಣಬಡಿಸಿದುದು ವಿಶೇಷತೆಯಾಗಿತ್ತು.

ಪತ್ರೊಡೆ,ಬಾಳೆಹೂವಿನ ಚಟ್ನಿ,ಪಲ್ಯ,ಬಾಳೆದಿಂಡಿನ ಪಲ್ಯ,ಕೋಸಂಬರಿ,ಒಂದೆಲಗ ಚಟ್ನಿ,ಕಾಶಿ ಹಲ್ವ,ಸಾವಯವ ಕೆಂಪು ಅಕ್ಕಿ ಅನ್ನ,ಹುರಳಿಸಾರು, ಹಸಿ ತರಕಾರಿ ಸಲಾಡ್,ಪಾಯಸ ಹಾಗೂ ಮಜ್ಜಿಗೆಯನ್ನೂ ಒಳಗೊಂಡ ವಿಶಿಷ್ಟ ಗ್ರಾಮೀಣ ಖಾದ್ಯಗಳು ಎಲ್ಲರ ಗಮನ ಸೆಳೆಯಿತು.