ತುಂಬೆಯಲ್ಲಿ ಸ್ವಚ್ಚತಾ ಆಂದೋಲನ ಕಾರ್ಯಕ್ರಮ
ಬಂಟ್ವಾಳ: ತುಂಬೆ ಗ್ರಾಮ ಪಂಚಾಯತ್ ಹಾಗೂ ಸಾಹಸ್ ಸಂಸ್ಥೆಯ ಸಹಯೋಗದೊಂದಿಗೆ ಬಿ.ಎ. ಕೈಗಾರಿಕಾ ತರಬೇತಿ ಸಂಸ್ಥೆ ಮತ್ತು ದ.ಕ.ಜಿ.ಪ. ಶಾಲೆ ತುಂಬೆ ಇವರ ಸಹಕಾರದಲ್ಲಿ ಸ್ವಚ್ಚತಾ ಆಂದೋಲನ ಕಾರ್ಯಕ್ರಮವು ತುಂಬೆ ಬಿ.ಎ. ಮೈದಾನದಲ್ಲಿ ನಡೆಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಕೇಶವ ಆಂದೋಲನಕ್ಕೆ ಚಾಲನೆ ನೀಡಿದರು.ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಸ್ವಚ್ಚತೆ ಬಗ್ಗೆ ಜನರಿಗೆ ಅರಿವು ಮೂಡಿಸಿದರು.ತುಂಬೆ ರಾಮಲ್ ಕಟ್ಟೆಯಲ್ಲಿ ಹಸಿರು ದಳದ ನಾಗರಾಜ ತ್ಯಾಜ್ಯ ವಿಂಗಡನೆಯ ಮಹತ್ವದ ಕುರಿತು ತಿಳಿಸಿದರು.
ಸಾಹಸ್ ಸಂಸ್ಧೆಯ ಮೇಲ್ವಿಚಾರಕ ಸುದರ್ಶನ್ ಸ್ವಚ್ಚತೆಯ ಬಗ್ಗೆ ಗ್ರಾಮದ ನಾಗರಿಕನ ಜವಾಬ್ದಾರಿಯ ಬಗ್ಗೆ ಮಾಹಿತಿ ನೀಡಿದರು. ಬಿ.ಎ. ತರಬೇತಿಯ ಪ್ರಾಂಶುಪಾಲ ನವೀನ್ ಕೆ.ಎಸ್. ಸ್ವಚ್ಚತಾ ಹಿ ಸೇವೆಯ ಪ್ರತಿಜ್ಞಾ ವಿಧಿ ಬೋದಿಸಿದರು.
ಗ್ರಾ.ಪಂ. ಉಪಾಧ್ಯಕ್ಷ ಗಣೇಶ್ ಸಾಲಿಯಾನ್,ಪಂಚಾಯತ್ ಸದಸ್ಯರಾದ ಹೇಮಲತ ಜಿ ಪೂಜಾರಿ,ಮಹಮ್ಮದ್ ಝಹೂರ್,ಅರುಣ್ ಕುಮಾರ್ ಗಾಣದ ಲಚ್ಚಿಲ್,ಜಯಂತಿ ನಾಗೇಶ್,ಜಯಂತಿ ಶ್ರೀಧರ್,ಸಮಾಜಿಕ ಕಾರ್ಯಕರ್ತ ಸದಾಶಿವ ಡಿ. ತುಂಬೆ,ಹಿರಿಯರಾದ ಗಂಗಾಧರ ಅಮೀನ್ ರಾಮಲ್ ಕಟ್ಟೆ,ಪ್ರಮುಖರಾದ ಹರೀಶ್ ರೊಟ್ಟಿಗುಡ್ಡೆ,ಜಗದೀಶ್ ಗಟ್ಟಿ,ನವೀನ್ ಕೊಟ್ಟಿಂಜ,ರಂಜಿತ್ ಮಜಿ,ಗೋಪಾಲ ಕೃಷ್ಣ ಕೊಟ್ಟಿಂಜ,ಶ್ರೀಧರ್ ರಾಮಲ್ ಕಟ್ಟೆ,ಪಂಚಾಯತ್ ಸಿಬ್ಬಂದಿಗಳಾದ ಪೂರ್ಣಿಮಾ ಮತ್ತು ಬಬಿತ,ಗ್ರಂಥಾಲಯ ಮೇಲ್ವಿಚಾರಕಿ ಅಶ್ವಿನಿ,ಎಲ್ ಸಿ ಆರ್ ಪಿ ಚಂದ್ರಾವತಿ,ಅಂಗನವಾಡಿ,ಆಶಾ ಕಾರ್ಯಕರ್ತೆಯರು,ಸಾಹಸ್ ಎನ್.ಜಿ.ಓ ಸೂರಜ್.ಕೆ ಮತ್ತಿತರರು ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ್ ನ ಪಿಡಿಒ ಚಂದ್ರಾವತಿ ಸ್ವಾಗತಿಸಿ,ಮಾಜಿ ಅಧ್ಯಕ್ಷ ಪ್ರವೀಣ್ ಬಿ.ತುಂಬೆ ಪ್ರಸ್ತಾವನೆಗೈದರು.