ಬಂಟ್ವಾಳ: ಮಾಣಿಲ ನಂಬುಗೆಯ ಆಧಾರದಲ್ಲಿ ನಿಂತ ನೆಲ,ನಿತ್ಯಾನಂದರು ಸಂತನಾಗಿ ಎಲ್ಲರೊಂದಿಗೆ ಆನಂದ ನೀಡಿದ ದಿವ್ಯ ಪುರುಷ,ಶ್ರೀ ಮಹಾಲಕ್ಷ್ಮಿ ದೇವಿಯ ಸೇವೆಯಿಂದ ನಂಬಿದ ಭಕ್ತರಿಗೆ ಪ್ರಾಪ್ತಿ ಫಲ,ಮಾಣಿಲ ಸರ್ವ ಜಾತಿ ಜನಾಂಗವನ್ನು ಎಂದಿಗೂ ಸ್ವಾಗತಿಸುವ ಕರುಣಾಳು ಸ್ಥಳ.ನಾನು ಸಂತ ಮಾತ್ರ ನೀವು ಕ್ಷೇತ್ರ ಅಭಿವ್ರದ್ದಿಯ ಸೂತ್ರ ಎಂದು ಶ್ರೀಧಾಮ ಮಾಣಿಲದ  ಶ್ರೀಮೋಹನದಾಸ ಸ್ವಾಮೀಜಿ ನುಡಿದರು.

ಮಾಣಿಲ ಶ್ರೀ ದುರ್ಗಾಮಹಾಲಕ್ಷ್ಮಿ ಕ್ಷೇತ್ರದಲ್ಲಾದ ಬೆಳ್ಳಿಹಬ್ಬ ಮಹೋತ್ಸವದ ಶ್ರೀ ವರಮಹಾಲಕ್ಷ್ಮೀ ವೃತಾಚರಣೆ ಯಶಸ್ವಿಯಾಗಿ ನಡೆದಿರುವ ಹಿನ್ನಲೆಯಲ್ಲಿ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಬುಧವಾರ ಸಂಜೆ‌ ನಡೆದ ಕೃತಜ್ಞತಾ ಸಮರ್ಪಣಾ ಸಭೆ ಮತ್ತು ಅ. 15 ರಿಂದ 25 ರ ತನಕ ನಡೆಯುವ ಶರನ್ನವರಾತ್ರಿಯ ಬೆಳ್ಳಿ ಹಬ್ಬ ಮಹೋತ್ಸವದ ಪೂರ್ವ ಭಾವಿ ವಿಶೇಷ ಸಭೆಯಲ್ಲಿ ಶ್ರೀಗಳು ಭಾಗವಹಿಸಿ ಆರ್ಶೀವಚನ ನೀಡಿದರು.

ಭಕ್ತ ಸಮೂಹದ ಸಹಕಾರದಿಂದಾಗಿ‌  ವರಮಹಾಲಕ್ಷ್ಮೀ ವೃತಾಚರಣೆಯ ಬೆಳ್ಳಿಹಬ್ಬ ಅತ್ಯಂತ ಯಶಸ್ವಿಯಾಗಿ ನಡೆದಿರುವುದು ಮನಸ್ಸಿಗೆ ಆನಂದವನ್ನು‌ ತಂದಿದೆ.ಮುಂದಿನ ತಿಂಗಳು ನಡೆಯಲಿರುವ ಶರನ್ನವರಾತ್ರಿಯ ಬೆಳ್ಳಿ ಹಬ್ಬ ಮಹೋತ್ಸವದ ಯಶಸ್ಸಿಗೂ ಭಕ್ತರ ಸಹಕಾರವನ್ನು ಯಾಚಿಸಿದರು.

ಶ್ರೀ ರಕ್ತೇಶ್ವರಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ  ಬಿ.ವಿಶ್ವನಾಥ್,ಟ್ರಷ್ಟಿ ಶಿವಶಂಕರ್,ಪ್ರಮುಖರಾದ ನಿವೃತ್ತ ಬ್ಯಾಂಕ್ ಉದ್ಯೋಗಿ ಬೇಬಿ ಕುಂದರ್,ನಿವೃತ್ತ ಶಿಕ್ಷಕ ಟಿ.ಸೇಷಪ್ಪ ಮಾಸ್ಟರ್,ಮಾಜಿ ಬೂಡಾ ಅಧ್ಯಕ್ಷ ಸದಾಶಿವ ಬಂಗೇರ‌,ಟ್ರಸ್ಟಿಗಳಾದ ಸುಧಾಕರ್ ಸಾಲಿಯಾನ್,ನಾರಾಯಣ ಸಿ.ಪೆರ್ನೆ,ಮನೋಹರ ನೇರಂಬೋಲು,ಸುಕುಮಾರ್ ಬಂಟ್ವಾಳ,ನಿತೇಶ್ ಕುಲಾಲ್ ಪಲ್ಲಿಕಂಡ,ಜಯಂತ್ ವಗ್ಗ,ರಮೇಶ್ ಪಣೋಲಿಬೈಲ್, ಜಯಾನಂದ್ ಪೆರಾಜೆ,ಕರುಣೇಂದ್ರ ಪೂಜಾರಿ,ನಾರಾಯಣ್,ಕೇಶವ ಅಸಲ್ದೋಡಿ,ಲಿಂಗಪ್ಪ ಕುಲಾಲ್ ಪಲ್ಲಿಕಂಡ,ತಿಮ್ಮಪ್ಪ ಕುಲಾಲ್,ಸುರೇಶ್ ಕುಲಾಲ್,ಭಾಸ್ಕರ್ ಕುಲಾಲ್ ಬೆಂಗಳೂರು ಉಪಸ್ಥಿತರಿದ್ದರು.

ಕೇಂದ್ರ ಸಮಿತಿಯ ಪ್ರ.ಕಾರ್ಯದರ್ಶಿ ದೇವಪ್ಪ ಕುಲಾಲ್ ಪಂಜಿಕಲ್ಲು ಸ್ವಾಗತಿಸಿದರು.ನ್ಯಾಯವಾದಿ ಸುರೇಶ್ ಕುಲಾಲ್ ಮಾಹಿತಿ ನೀಡಿದರು.  ಟ್ರಸ್ಟಿ ಮಚ್ಚೆಂದ್ರ ಸಾಲಿಯಾನ್ ವಂದಿಸಿ,ಕಲಾವಿದ ಎಚ್ .ಕೆ.ನಯನಾಡು ನಿರೂಪಿಸಿದರು. 

By suddi9

Leave a Reply

Your email address will not be published. Required fields are marked *