ಮುಹಿಯುದ್ದೀನ್ ಜುಮಾ ಮಸೀದಿ ವತಿಯಿಂದ ಈದ್ ಮಿಲಾದ್ ಕಾರ್ಯಕ್ರಮ
ಬಂಟ್ವಾಳ : ಕಲ್ಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಇದರ ವತಿಯಿಂದ ಪ್ರವಾದಿ ಮುಹಮ್ಮದ್ ಪೈಗಂಬರ್ ರವರ ಜನ್ಮ ದಿನಾಚರಣೆ ಈದ್ ಮಿಲಾದ್ ಕಾರ್ಯಕ್ರಮ ಮಸೀದಿ ವಠಾರದಲ್ಲಿ ಆಚರಿಸಲಾಯಿತು.
ಮಸೀದಿ ಖತೀಬ್ ಉಸ್ಮಾನ್ ದಾರಿಮಿ ಕಾರ್ಯಕ್ರಮ ಉದ್ಘಾಟಿಸಿದರು,ಎಂ.ಜೆ.ಎಂ. ಅಧ್ಯಕ್ಷ ಅಬೂಬಕ್ಕರ್ ಹಾಜಿ ಗೋಳ್ತಮಜಲು ಅಧ್ಯಕ್ಷತೆ ವಹಿಸಿದ್ದರು.ಗೋಳ್ತಮಜಲು ರಹ್ಮಾನಿಯಾ ಜುಮಾ ಮಸೀದಿ ಅಧ್ಯಕ್ಷ ಹಾಜಿ ಜಿ.ಮುಹಮ್ಮದ್ ಹನೀಫ್,ಕೆ.ಸಿ.ರೋಡ್ ಆಯಿಷಾ ಇಬ್ರಾಹಿಂ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ಖಾದರ್ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.
ಮದರಸ ಮುಖ್ಯ ಶಿಕ್ಷಕರುಗಳಾದ ಅಬ್ದುಲ್ ಲತೀಫ್ ದಾರಿಮಿ ಕಲ್ಲಡ್ಕ,ಅಬ್ದುಲ್ ಹಮೀದ್ ದಾರಿಮಿ ಗೋಳ್ತಮಜಲು,ಯಹ್ಯಾ ದಾರಿಮಿ ಕೆ.ಸಿ.ರೋಡ್ ಈದ್ ಮಿಲಾದ್ ಸಂದೇಶ ನೀಡಿದರು.
ಕಲ್ಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಉಪಾಧ್ಯಕ್ಷ ಹಾಜಿ ಮುಹಮ್ಮದ್ ಶಾಫಿ, ಕೋಶಾಧಿಕಾರಿ ಯೂಸುಫ್ ಹಾಜಿ ಅಮರ್, ಪದಾಧಿಕಾರಿಗಳಾದ ಸಾದಿಕ್,ಕೆ.ಎನ್. ನವಾಝ್,ಸೂರಜ್ ಹುಸೈನ್,ಅಬೂಬಕ್ಕರ್ ಮುರಬೈಲು,ಕಾಸಿಂ ಕಲ್ಲಡ್ಕ,ಅಬ್ಬಾಸ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಿಲಾದ್ ಕಾರ್ಯಕ್ರಮದ ಅಂಗವಾಗಿ ಮದರಸ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ,ಬಹುಮಾನ ವಿತರಣೆ,ಮಿಲಾದ್ ಜಾಥಾ, ಅನ್ನದಾನ ಕಾರ್ಯಕ್ರಮ ನಡೆಯಿತು.
ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಸಾಹೇಬ್ ಸ್ವಾಗತಿಸಿದರು.ಹಮೀದ್ ಗೋಳ್ತಮಜಲು ವಂದಿಸಿ,ಕಾರ್ಯಕ್ರಮ ನಿರೂಪಿಸಿದರು