ದಿ.ಜಗದೀಶ್ ನಲ್ಕ ಕುಟುಂಬಕ್ಕೆ ಸಹಾಯಧನ
ಪೊಳಲಿ: ಯಕ್ಷಗಾನ ಕಲಾವಿದ ದಿ.ಜಗದೀಶ್ ನಲ್ಕ ಅವರು ಇತ್ತೀಚೆಗೆ ನಿಧನ ಹೊಂದಿದ್ದು,ಜಗದೀಶ್ ನಲ್ಕ ಅವರ ಕುಟುಂಬಕ್ಕೆ ಷಷ್ಠಿ ಯಕ್ಷಗಾನ ಬಯಲಾಟ ಸಮಿತಿ,ಎಸ್ ಆರ್ ಹಿಂದೂ ಫ್ರೆಂಡ್ಸ್,ಯಕ್ಷಕಲಾ ಪೊಳಲಿ ಹಾಗೂ ಪೊಳಲಿಯ ಅಭಿಮಾನಿ ಬಳಗ ಮತ್ತು ಅವರ ಹಿತೈಷಿಗಳು ಜಗದೀಶ್ ನಲ್ಕ ಅವರ ಧರ್ಮ ಪತ್ನಿ ಹೇಮಾವತಿ ಅವರಿಗೆ ಸಹಾಯ ಧನವನ್ನು ಸೆ.೨೬ರಂದು ಮಂಗಳವಾರ ಪೊಳಲಿಯಲ್ಲಿ ನೀಡಲಾಯಿತು.

ಈ ಸಂದರ್ಭದಲ್ಲಿ ಪೊಳಲಿ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್,ನಾಗೇಶ್ ರಾವ್,ವೆಂಕಟೇಶ್ ನಾವಡ,ಚಂದ್ರಶೇಖರ್ ದೇವಾಡಿಗ,ಮನೋಜ್ ಕುಮಾರ್ ಪೊಳಲಿ,ಸಂದೀಪ್ ಪೊಳಲಿ,ನವೀನ್ ಪೊಳಲಿ,ಸೇಸಪ್ಪ ದೇವಾಡಿಗ ಪೊಳಲಿ ಉಪಸ್ಥಿತರಿದ್ದರು.