ಪೊಳಲಿ ರಾಮಕೃಷ್ಣ ತಪೋವನದಲ್ಲಿ ಲೋಕದ ಕಲ್ಯಾಣಕ್ಕಾಗಿ, ಮನುಕುಲದ ಉದ್ಧಾರಕ್ಕಾಗಿ ಅಖಂಡ ಭಜನಾ ಸಪ್ತಾಹ: ಸ್ವಾಮಿ ವಿವೇಕಚೈತನ್ಯಾನಂದ ಸ್ವಾಮೀಜಿ
ಪೊಳಲಿ: ರಾಮಕೃಷ್ಣ ತಪೋವನ ಪ್ರಾರಂಭವಾಗಿ ಸುಮಾರು ೧೫ ವರ್ಷ ಆಗಿದೆ ಇದರಲ್ಲಿ ಕೇಂದ್ರ ಬಿಂದು ಅಂದರೆ ಭಗವಾನ್ ರಾಮಕೃಷ್ಣರ ವಿಶ್ವ ಭಾವೈಕ್ಯ ಮಂದಿರ,ಪಂಚವಟಿ ಶಾರದಾ ಮಾತೆಯ ಪರ್ಣ ಕುಟೀರ,ಹಾಗೂ ಉಚಿತ ವಸತಿ ನಿಲಯ.
ಇತ್ತೀಚೆಗೆ ಗಣ್ಯರೊಂದಿಗೆ ಮಾಡಿದ ಸಮಾಲೋಚನೆಯಲ್ಲಿ ಲೋಕದ ಕಲ್ಯಾಣಕ್ಕಾಗಿ,ಮನುಕುಲದ ಉದ್ಧಾರಕ್ಕಾಗಿ ಸೆ.೨೩ರಿಂದ ೩೦ರ ವರೆಗೆ ಒಂದು ವಾರಗಳ ಕಾಲ ಅಖಂಡ ಭಜನಾ ಸಪ್ತಾಹ ನಡೆಸುವುದೆಂದು ನಿರ್ಧರಿಸಲಾಗಿದೆ,ಇದರಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಸುಮಾರು ೧೬೭ ಭಜನಾ ತಂಡಗಳು ದಿನದ ೨೪ಗಂಟೆ,ಏಳು ದಿನಗಳ ಕಾಲ ಪಾಲ್ಗೊಳ್ಳಲಿವೆ ಎಂದು ಸ್ವಾಮಿ ವಿವೇಕಚೈತನ್ಯಾನಂದ ಸ್ವಾಮೀಜಿ ಹೇಳಿದರು.

ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಸ್ವಾಮೀಜಿ ತಪೋವನದ ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದ ಅವರು ತಪೋವನವು ಸುಮಾರು ೧೪ ಶಾಲೆಗಳಿಗೆ ಉಚಿತ ನೋಟ್ ಪುಸ್ತಕಗಳನ್ನು ಇನ್ನು ಕೆಲವು ಶಾಲೆಗಳಿಗೆ ಯುನಿಫಾರಮ್‌ಗಳನ್ನು ನೀಡುತ್ತಾ ಬಂದಿದೆ,ಇದಲ್ಲದೆ ತಪೋವನದ ವತಿಯಿಂದ ಸುಮಾರು ೨೫೦-೩೦೦ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಗುತ್ತಿದೆ.
ತಪೋವನದ ಉಚಿತ ವಸತಿ ಗೃಹದಲ್ಲಿ ೬೦ ಮಕ್ಕಳಿದ್ದು,ಮಕ್ಕಳಿಗಾಗಿ ಪ್ರತಿದಿನ ಸ್ಕೇಟಿಂಗ್,ಸಮರ ಕಲೆ,ಜೂಡೊ,ಕರಾಟೆ ಇಂತಹ ತರಗತಿಗಳನ್ನು ನಡೆಸಲಾಗುತ್ತಿದೆ.ಭಾನುವಾರ ಆಶ್ರಮದ ಹಾಗೂ ಹೊರಗಿನ ಮಕ್ಕಳಿಗೆ ಯಕ್ಷಗಾನ ತರಬೇತಿ,ಹಾಗೇ ಹಳ್ಳಿಯ ಮಹಿಳೆಯರ ಸಬಲೀಕರಣಕ್ಕಾಗಿ ಉಚಿತ ಹೊಲಿಗೆ ತರಬೇತಿ,ಮಶಿನ್ ಎಂಬ್ರೈಡರಿ,ಬ್ಯುಟೀಷಿಯನ್ ಕೋರ್ಸ್,ಹಾಗೂ ಒಂದು ತಿಂಗಳ ಹಿಂದೆ ಆಯೋಜಿಸಿದ ತೆಂಗಿನ ಕಾಯಿ ಗೆರಟೆ ಸಾಮಾಗ್ರಿ ತಯಾರಿಕಾ ಕಲೆಯಿಂದ ಆ ವಸ್ತುಗಳನ್ನು ಮಾರಾಟ ಮಾಡಿ ಮಹಿಳೆಯರು ಅದರಿಂದ ಆದಾಯ ಗಳಿಸಿದ್ದಾರೆ.
ತಪೋವನವು ಇಂತಹ ಹತ್ತಾರು ಸಮಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿರುತ್ತದೆ ಎಂದು ಹೇಳುತ್ತಾ .
ಇಂದಿನ ದಿನಗಳಲ್ಲಿ ಮಕ್ಕಳು ಮಾದಕ ವಸ್ತುಗಳ ವ್ಯಸನಿಗಳಾಗುತ್ತಿದ್ದಾರೆ, ಡ್ರಗ್ಸ್, ಗಾಂಜಾ ವ್ಯಸನಕ್ಕೆ ಈಡಾಗಿ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ, ವಿಶೇಷವಾಗಿ ವಿದ್ಯಾರ್ಥಿಗಳು ಮೊಬೈಲ್, ಡ್ರಗ್,ಆಲ್ಕೋಹಾಲ್,ಸ್ಮೋಕಿಂಗ್ ಇವುಗಳಿಗೆ ಅಡಿಕ್ಟ್ ಆದಂತಹ ಮಕ್ಕಳ ಬಾಳು ಉದ್ದಾರ ಆಗಬೇಕು,
ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಸಮಾಜಕ್ಕೆ ಉಪಯೋಗ ಆಗುವ ಹಾಗೆ ಜೀವನ ನಡೆಸಬೇಕು ಹಾಗೆ ಆಗಬೇಕಾದರೆ ನಾವು ಭಗವಂತನ ನಾಮ ಸಂಕೀರ್ತನೆ ಮಾಡಬೇಕು,ಭಗವಾನ್ ಶ್ರೀ ರಾಮಕೃಷ್ಣರು ಜೀವನದಲ್ಲಿ ಭಗವಂತನ ನಾಮ ಸಂಕೀರ್ತನೆ ಮಾಡಿದರೆ ಭಗವಂತನ ಸಾಕ್ಷಾತ್ಕಾರ ದೊರೆಯುತ್ತದೆ ಎಂದು ಯಾವತ್ತೂ ಹೇಳುತ್ತಿದ್ದರು “ಅನ್ನಗತ ಪ್ರಾಣಃ” ಅಂದರೆ ಈ ಕಾಲದಲ್ಲಿ ಮನುಷ್ಯರಿಗೆ ಆಯುಷ್ಯ ಕಡಿಮೆ,ಧ್ಯಾನ,ತಪಸ್ಸು ಮಾಡಲು ಮನುಷ್ಯನಿಗೆ ಸಾಧ್ಯವಿಲ್ಲ,ಅದಕ್ಕೋಸ್ಕರ ಭಗವಂತನ ನಾಮ ಸ್ಮರಣೆ,ಭಜನೆ ಮಾಡುವುದರಿಂದ ಭಗವಂತನನ್ನು ಒಲಿಸಿಕೊಳ್ಳಬಹುದು ಎಂದು ರಾಮಕೃಷ್ಣರು ಹೇಳುತ್ತಿದ್ದರು, ಆ ನಿಟ್ಟಿನಲ್ಲಿ ತಪೋವನದಲ್ಲಿ ಆಶ್ರಮದ ವತಿಯಿಂದ ಊರಿನ,ಪರವೂರಿನ ಬಂಧುಗಳ ಸಹಕಾರದಿಂದ ನಿರಂತರವಾಗಿ ೨೩ ರಿಂದ ೩೦ರ ವರೆಗೆ ಅಖಂಡ ಭಜನಾ ಸಪ್ತಾಹ ನಡೆಯಲಿದೆ ,ಈ ಕಾರ್ಯಕ್ರಮಕ್ಕೆ ಎಲ್ಲಾ ಭಕ್ತರು,ಸಾರ್ವಜನಿಕರು ಪಾಲ್ಗೊಂಡು ಭಗವಂತನ ಕೃಪೆಯಲ್ಲಿ ಪಾತ್ರರಾಗಬೇಕೆಂದು ಸ್ವಾಮಿ ವಿವೇಕಚೈತನ್ಯಾನಂದ ಸ್ವಾಮೀಜಿ ತಿಳಿಸಿದ್ದಾರೆ.