ಪತ್ರಕರ್ತ ಐ.ಬಿ. ಸಂದೀಪ್ ಸಹಿತ ಮೂವರಿಗೆ ಸನ್ಮಾನ
ಬಂಟ್ವಾಳ: ತಾಲೂಕಿನ ಇರ್ವತ್ತೂರು ಪದವು ಶ್ರೀ ಗಣೇಶನ ಕಟ್ಟೆಯಲ್ಲಿ ನಡೆದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಂದರ್ಭದಲ್ಲಿ ಸಾಧಕರಾದ ನಿವೃತ್ತ ಅರಣ್ಯ ರಕ್ಷಕ ಭುಜಂಗ ಡಿ.ಎನ್.,ಪತ್ರಕರ್ತ ಐ.ಬಿ. ಸಂದೀಪ್ ಕುಮಾರ್ ಇರ್ವತ್ತೂರು ಬೀಡು,ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಸುನಿಲ್ ಸಿಕ್ವೆರಾ ಅವರನ್ನು ಸನ್ಮಾನಿಸಲಾಯಿತು.

ಸಮಿತಿ ಅಧ್ಯಕ್ಷ ನಿಶ್ಚಿತ್ ಶೆಟ್ಟಿ ಮಜಲು,ಗೌರವಾಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ ಇರ್ವತ್ತೂರು,ದೇವಪ್ಪ ಶೆಟ್ಟಿ ಕುಂಟಜಾಲು,ಪ್ರಮುಖರಾದ ಸಂಜೀವ ಪೂಜಾರಿ ಗುರುಕೃಪಾ,ವಸಂತ ಶೆಟ್ಟಿ ಕೇದಗೆ,ಮೋಹನ್ ಶೆಟ್ಟಿ ನರ್ವಲ್ದಡ್ಡ,ಸುಧಾಕರ ಶೆಣೈ ಖಂಡಿಗ,ಬೂಬ ಸಪಲ್ಯ,ಸುರೇಂದ್ರ ಶೆಟ್ಟಿ ಎರ್ಮೆನಾಡು,ದಯಾನಂದ ಎರ್ಮೆನಾಡು,ಸುರೇಶ್ ಕಯ್ಯಬೆ,ಸತೀಶ್ ಕರ್ಕೆರ ಮತ್ತಿತರರು ಉಪಸ್ಥಿತರಿದ್ದರು.