Published On: Wed, Sep 27th, 2023

ಸ್ವದೇಶಿ ಸಪ್ತಾಹದ ಪ್ರಯುಕ್ತ “ಆಶುಭಾಷಣ ಸ್ಪರ್ಧೆ”

ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ “ಸ್ವದೇಶಿ ಸಪ್ತಾಹದ ಪ್ರಯುಕ್ತ” ಆಶುಭಾಷಣ ಸ್ಪರ್ಧೆ ನಡೆಯಿತು.ಕಾಲೇಜಿನ ಪ್ರಜ್ಞಾನ ಸಾಹಿತ್ಯ ಸಂಘದ ವತಿಯಿಂದ ನಡೆದ ಈ ಸ್ಪರ್ಧೆಯಲ್ಲಿ ಒಟ್ಟು ೧೮ ವಿದ್ಯಾರ್ಥಿಗಳು ಭಾಗವಹಿಸಿದ್ದು,ಸ್ವಾತಿಲಕ್ಷೀ ದ್ವಿತೀಯ ಬಿ.ಸಿ.ಎ -ಪ್ರಥಮ ಸ್ಥಾನ,ವಿಜಯ ವಿಠಲ ತೃತೀಯ ಬಿ.ಕಾಂ.- ದ್ವಿತೀಯ ಸ್ಥಾನ,ಪುನೀತ್ ಕುಮಾರ್ ದ್ವಿತೀಯ ಬಿ.ಕಾಂ-ತೃತೀಯ ಸ್ಥಾನ ಪಡೆದಿದ್ದಾರೆ.ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಗಂಧರ್ವ,ರಕ್ಷಾ,ಧನಂಜಯ್ ತೀರ್ಪುಗಾರರಾಗಿ ಸಹಕರಿಸಿದರು.ವಿದ್ಯಾರ್ಥಿಗಳಾದ ಧನುಷ ಕಾರ್ಯಕ್ರಮ ನಿರೂಪಿಸಿದರು, ಮೇಘಶ್ರೀ ಸ್ವಾಗತಿಸಿ,ವಂದಿಸಿದರು.ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಉಪಸ್ಥಿತರಿದ್ದರು.ಸಾಹಿತ್ಯ ಸಂಘದ ನಿರ್ದೇಶಕಿಯಾದ ಸಂಧ್ಯಾ ಹಾಗೂ ಸಹನಿರ್ದೇಶಕರಾದ ರಶ್ಮಿತಾ .ಎಸ್ ಸಹಕರಿಸಿದರು.‌

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter