ಯುವ ಸಮುದಾಯ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಿ: ಶಾಸಕ ರಾಜೇಶ್ ನಾಯ್ಕ್ ಕರೆ
ಬಂಟ್ವಾಳ: ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಹಿಂದೂ ಸಮಾಜದ ಒಗ್ಗಟ್ಟು ಆಗಬೇಕು ಎಂಬ ಚಿಂತನೆಯ ಫಲವೇ ಗಣೇಶೋತ್ಸವ.ಯುವ ಸಮುದಾಯ ಇಂತಹ ಸಂಘಟನೆಯ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುವಂತೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಕರೆ ನೀಡಿದರು.
ವಾಮದಪದವಿನ ಶ್ರೀ ಗಣೇಶ ಮಂದಿರದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ವಾಮದಪದವು ಇದರ 40 ನೇ ವರ್ಷದ ಶ್ರೀ ಗೌರಿ ಗಣೇಶೋತ್ಸವ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಸಾಹಿತಿ,ಚಿಂತಕರಾದ ವೀಣಾ ಬನ್ನಂಜೆ ಧಾರ್ಮಿಕ ಉಪನ್ಯಾಸ ನೀಡಿದರು.
ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ,ಉದ್ಯಮಿ ಐತ್ತಪ್ಪ ಆಳ್ವ ಸುಜೀರ್ ಗುತ್ತು,ಬಿಜೆಪಿ ಮಾಧ್ಯಮ ಸಂಚಾಲಕ ಸಂದೇಶ್ ಶೆಟ್ಟಿ, ಜೆ.ಸಿ.ಐ.ವಲಯ ಅಧ್ಯಕ್ಷ ಭರತ್ ಶೆಟ್ಟಿ ಆಲಬೆ,ನಿವೃತ್ತ ಸೈನಿಕ ಮೋಹನ್ ಜಿ.ಮೂಲ್ಯ,ಉದ್ಯಮಿ ಕೀರ್ತಿ ರಾಜ್ ಜೈನ್ ಬೆಂಗಳೂರು ಅತಿಥಿಗಳಾಗಿ ಭಾಗವಹಿಸಿದ್ದರು.
ಗಣೇಶೋತ್ಸವ ಸಮಿತಿ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ ವಾಮದಪದವು,ಪ್ರಮುಖರಾದ ಸುಲೋಚನ ಜಿ.ಕೆ.ಭಟ್,ರಮೇಶ್ ಶೆಟ್ಟಿ ವಾಮದಪದವು,ಗಣೇಶ್ ಪ್ರಭು ಓಮ,ದೀಪಕ್ ರೈ ಮಾವಿನ ಕಟ್ಟೆ,ಸಂದೀಪ್ ಕೊರ್ಲೋಡಿ,ರೇಣುಕಾ ವಿ.ರೈ ಸಮಿತಿ ಪದಾಧಿಕಾರಿಗಳು, ಪ್ರಮುಖರು ಉಪಸ್ಥಿತರಿದ್ದರು