ಮೊಡಂಕಾಪು: ವಿದ್ಯಾರ್ಥಿ ಪರಿಷತ್ ನ ಉದ್ಘಾಟನಾ ಸಮಾರಂಭ
ಬಂಟ್ವಾಳ : ಮೊಡಂಕಾಪು ಕಾರ್ಮೆಲ್ ಕಾಲೇಜಿನ ವಿದ್ಯಾರ್ಥಿ ಪರಿಷತ್ ಇದರ 2023- 24 ನೇ ಸಾಲಿನ ಉದ್ಘಾಟನಾ ಸಮಾರಂಭವು ಕಾಲೇಜು ಸಭಾಂಗಣದಲ್ಲಿ ನಡೆಯಿತು.
ಬಂಟ್ವಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ. ಪ್ರಕಾಶ್ ಚಂದ್ರ ಬಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿ,ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ನಾಯಕತ್ವದ ಗುಣವಿದೆ.ನಾವೆಲ್ಲರೂ ನಮ್ಮ ಜೀವನಕ್ಕೆ ನಾಯಕರು,ವಿದ್ಯಾರ್ಥಿಗಳಿಗೆ ಸಾಧಿಸಬೇಕೆಂಬ ಛಲ ಇದ್ದರೆ ಮಾತ್ರ ಭವಿಷ್ಯದಲ್ಲಿ ಉತ್ತಮ ನಾಗರೀಕರಾಗಿ ಮುಂದುವರಿಯಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೊಡಂಕಾಪು ಕಾರ್ಮೆಲ್ ಕಾಲೇಜು ಪ್ರಾಂಶುಪಾಲೆ ಭಗಿನಿ ಲತಾ ಫೆರ್ನಾಂಡಿಸ್ ಎ ಸಿ,ಅವರು ವಿದ್ಯಾರ್ಥಿ ಪರಿಷತ್ತಿಗೆ ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳಿಗೂ ಶುಭ ಹಾರೈಸಿದರು.
ಕಾಲೇಜು ವಾಣಿಜ್ಯ ಉಪನ್ಯಾಸಕ ಜೋಯಲ್ ಮಸ್ಕರೇನಸ್,ವಿದ್ಯಾರ್ಥಿ ಪರಿಷತ್ ನಾಯಕಿ ಕುಮಾರಿ ಅಲ್ವಿಶ ಫ್ರಾಂಕ್,ಕಾರ್ಯದರ್ಶಿ ಕುಮಾರಿ ರಂಮ್ಜೀನ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ವೇಳೆ ಪ್ರಾಂಶುಪಾಲರು ಕಾಲೇಜು ಬಾವುಟವನ್ನು ವಿದ್ಯಾರ್ಥಿ ಪರಿಷತ್ತಿನ ನಾಯಕಿ ಹಾಗೂ ಕಾರ್ಯದರ್ಶಿಗೆ ಹಸ್ತಾಂತರಿಸಿದರು.ವಿದ್ಯಾರ್ಥಿ ಪರಿಷತ್ತಿನ ಎಲ್ಲಾ ನಾಯಕರಿಗೆ ಪ್ರಾಂಶುಪಾಲರು ಪ್ರಮಾಣ ವಚನ ಬೋಧಿಸಿದರು.
ವಿದ್ಯಾರ್ಥಿ ಪರಿಷತ್ ನಾಯಕಿ ಅಲ್ವಿಶ ವಾರ್ಷಿಕ ಚಟುವಟಿಕೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.ವಿಧ್ಯಾರ್ಥಿಗಳಾದ ರಮ್ಜೀನಾ ಸ್ವಾಗತಿಸಿ, ಮುಸ್ತಾಫ ವಂದಿಸಿದರು,ಆಸಿಯ ಕಾರ್ಯಕ್ರಮ ನಿರೂಪಿಸಿದರು.