ಯುವಕರ ಕಾರ್ಯ ಶ್ಲಾಘನೀಯ: ಡಾ.ಭಟ್
ಬಂಟ್ವಾಳ: ಭಾರತೀಯ ಸಂಸ್ಕೃತಿ,ಕಲೆಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಯುವಕರ ತಂಡ ಮಾಡುತ್ತಿರುವುದು ಶ್ಲಾಘನೀಯ,ವೇಷದಲ್ಲಿ ಹುಲಿಯಾದರೆ ಸಾಲದು ದೇಶ ಧರ್ಮ,ಸಂಸ್ಕೃತಿಯ ಮೇಲಾಗುವ ಅಕ್ರಮಣದ ವಿರುದ್ಧವು ಯುವಕರು ಹುಲಿಯಾಗಿ ಘರ್ಜಿಸಬೇಕು ಎಂದು ಆರ್ ಎಸ್ ಎಸ್ ನ ದಕ್ಷಿಣ ಪ್ರಾಂತ್ಯ ಕಾರ್ಯಕಾರಿಣಿ ಸದಸ್ಯ,ಪುತ್ತೂರು ವಿವೇಕಾನಂದ ವಿದ್ಯಾ ವರ್ಧಕ ಸಂಘದ ಅಧ್ಯಕ್ಷ ಕಲ್ಲಡ್ಕ ಡಾ.ಪ್ರಭಾಕರ್ ಭಟ್ ಹೇಳಿದ್ದಾರೆ.
ಬಿ.ಸಿ.ರೋಡಿನ ಹಿಂದೂ ಧಾರ್ಮಿಕ ಸೇವಾ ಸಮಿತಿ ವತಿಯಿಂದ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರೀ ದೇವಿ ದೇವಸ್ಥಾನದ ವಠಾರದಲ್ಲಿ ನಡೆಯುವ 44 ನೇ ಗಣೇಶೋತ್ಸವದ ಪ್ರಯುಕ್ತ “ರೋರಿಂಗ್ ಟೈಗರ್ಸ್” ಅವರ ಮೂರನೇ ವರ್ಷದ ಹುಲಿ ವೇಷದ ಊದು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದೂ ಸಮಾಜವನ್ನು ಸಂಘಟಿತಗೊಳಿಸುವ ಕೆಲಸ ಯುವ ಸಮುದಾಯ ಮಾಡಬೇಕು.
ಇಂತಹ ಕಾರ್ಯಗಳು ಸಮಾಜವನ್ನು ಜಾಗೃತಗೊಳಿಸುತದಲ್ಲದೆ ಧೈರ್ಯ ತುಂಬುತ್ತದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಶರಣ್ ಪಂಪ್ ವೆಲ್,ಕ್ಯಾಪ್ಟನ್ ಬ್ರಿಜೇಶ್ ಚೌಟ,ಸಂದೇಶ್ ಶೆಟ್ಟಿ,ರಾಕೇಶ್ ಮಲ್ಲಿ,ದೇವದಾಸ್ ಶೆಟ್ಟಿ,ಭುವನೇಶ್ ಪಚ್ಚಿನಡ್ಕ,ಸುಜಿತ್ ಅಳ್ವ,ಸತೀಶ್ ಭಂಡಾರಿ ಕುಳತ್ತಬೆಟ್ಟು,ಪುನೀತ್ ಕೊಟ್ಟಾರಿ,ಸಂತೋಷ್ ಪೊಳಲಿ,ಚರಣ್ ಜುಮಾದಿಗುಡ್ಡೆ,ಸುಷ್ಮಾಚರಣ್, ಅಭಿಷೇಕ್ ಸರಪಾಡಿ,ಪ್ರದೀಪ್ ಅಜ್ಜಿಬೆಟ್ಟು,ಭುವಿತ್ ಶೆಟ್ಟಿ,ಗುರುರಾಜ್ ಬಂಟ್ವಾಳ ಮತ್ತಿತರರು ಉಪಸ್ಥಿತರಿದ್ದರು.