ಬಾಳ್ತಿಲ: ಕಲ್ಪವೃಕ್ಷ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆ
ಬಂಟ್ವಾಳ: ಬಾಳ್ತಿಲ ಗ್ರಾಮ ಪಂಚಾಯಿತ್ ನ ಕಲ್ಪವೃಕ್ಷ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾ ಸಭೆಯು ಬಾಳ್ತಿಲ ಗ್ರಾಮ ಪಂಚಾಯತ್ ನ ಸುವರ್ಣ ಸೌಧ ಸಭಾಂಗಣದಲ್ಲಿ ನಡೆಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷ ಬಿ. ಕೆ. ಅಣ್ಣು ಪೂಜಾರಿ ಸಭೆಯನ್ನು ಉದ್ಘಾಟಿಸಿ ಶುಭಹಾರೈಸಿದರು.ಗ್ರಾಮ ಪಂಚಾಯತ್ ಉಪಾಧ್ಯಕ್ಷೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ,ಒಕ್ಕೂಟದ ಅಧ್ಯಕ್ಷರು,ಉಪಾಧ್ಯಕ್ಷರು,ಕೋಶಧಿಕಾರಿ,ಕಾರ್ಯದರ್ಶಿ,ಗ್ರಾಮ ಪಂಚಾಯತ್ ಕಾರ್ಯದರ್ಶಿ, ತಾಲೂಕು ಪಂಚಾಯತ್ ನ ಎನ್ .ಆರ್ .ಎಲ್ .ಎಂ.ನ ವಲಯ ಮೇಲ್ವಿಚಾರಕಿ ಕುಸುಮ,ತಾಲೂಕು ಪಂಚಾಯತ್ ನ ಎನ್.ಆರ್.ಎಲ್.ಎಂ ಬಿಆರ್ ಪಿ ಸವಿತಾ,ಆರೋಗ್ಯ ಕಾರ್ಯಕರ್ತೆಯರು,ಒಕ್ಕೂಟದ ಪದಾಧಿಕಾರಿಗಳು,ವಾರ್ಡಿನ ಅಧ್ಯಕ್ಷರು,ಕಾರ್ಯದರ್ಶಿ,ಕೋಶಾಧಿಕಾರಿ,ಎಲ್ಲಾ ಸಂಘದ ಸದಸ್ಯರು,ಪಂಚಾಯತಿ ಸದಸ್ಯರು,ಪಂಚಾಯಿತಿ ಸಿಬ್ಬಂದಿಗಳು,ಒಕ್ಕೂಟದ ಸಿಬ್ಬಂದಿಗಳು,ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಪದಾಧಿಕಾರಿಗಳ ಆಯ್ಕೆ :
ಇದೇ ವೇಳೆ ಒಕ್ಕೂಟದ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು.
ಅಧ್ಯಕ್ಷೆಯಾಗಿ ಯಶೋಧ,ಉಪಾಧ್ಯಕ್ಷೆಯಾಗಿ ವಿದ್ಯಾ,ಕಾರ್ಯದರ್ಶಿಯಾಗಿ ಚೈತ್ರ,ಜೊತೆ ಕಾರ್ಯದರ್ಶಿಯಾಗಿ ಶ್ಯಾಮಲ,ಕೋಶಾಧಿಕಾರಿಯಾಗಿ ನೀತಾ ಇವರನ್ನು ಆಯ್ಕೆ ಮಾಡಲಾಯಿತು.
ಗ್ರಾಮ ಪಂಚಾಯತ್ ಸದಸ್ಯೆ ಜ್ಯೋತಿ ಸ್ವಾಗತಿಸಿದರು,ಗ್ರಾಮ ಪಂಚಾಯತ್ ಸದಸ್ಯೆ ಮಲ್ಲಿಕಾ ವಂದಿಸಿದರು,ಗ್ರಾಮ ಪಂಚಾಯತ್ ಸದಸ್ಯ ವಿಠಲ್ ನಾಯ್ಕ ನಿರೂಪಿಸಿದರು.