ಸಜಿಪ ಮೂಡ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ “ಸ್ವಾಸ್ತ್ಯ ಸಂಕಲ್ಪ” ಕಾರ್ಯಕ್ರಮ
ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಬಂಟ್ವಾಳ, ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಪಾಣೆಮಂಗಳೂರು ವಲಯ ಮತ್ತು ಜನಜಾಗೃತಿ ವೇದಿಕೆ ಬಂಟ್ವಾಳ ತಾಲೂಕು ಇವುಗಳ ಸಂಯುಕ್ತ ಆಶ್ರಯದಲ್ಲಿ ಸಜಿಪ ಮೂಡ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ “ಸ್ವಾಸ್ತ್ಯ ಸಂಕಲ್ಪ” ಕಾರ್ಯಕ್ರಮವು ನಡೆಯಿತು.
ಕಾಲೇಜಿನ ಪ್ರಾಂಶುಪಾಲರಾದ ಬಾಬು ಗಾವಂಕರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕಾರ್ಯಕ್ರಮದ ಪ್ರಯೋಜನವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಪ್ರಜೆಗಳಾಗಿ ಬಾಳುವಂತೆ ಕರೆ ನೀಡಿದರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ಬಂಟ್ವಾಳ ತಾಲೂಕು ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಅವರು ಮಾತನಾಡಿ, ದುಶ್ಚಟದಿಂದಾಗುವ ತೊಂದರೆಗಳು ಹಾಗೂ ಇದಕ್ಕೆ ಮಾರುಹೋಗದಂತೆ ಮುನ್ನೆಚ್ಚರಿಕೆಯ ಕ್ರಮದ ಬಗ್ಗೆ ಮಾಹಿತಿಯನ್ನು ನೀಡಿದರು.
ವೇದಿಕೆ ಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಯೋಜನಾಧಿಕಾರಿ ಮಾದವ ಗೌಡ, ಸಜೀಪಮುಡ ಒಕ್ಕೂಟ ಅಧ್ಯಕ್ಷೆ ಹರಿಣಾಕ್ಷಿ,ವಲಯದ ಮೇಲ್ವಿಚಾರಕಿ ಅಮಿತಾ, ವಿಭಾಗದ ಸೇವಾಪ್ರತಿನಿಧಿ ಸೌಮ್ಯ ಉಪಸ್ಥಿತರಿದ್ದರು. ಉಪನ್ಯಾಸಕರಾದ ಬಾಲಕೃಷ್ಣ ಎನ್ ವಿ. ಸ್ವಾಗತಿದರು. ಸೌಮ್ಯ ವಂದಿಸಿದರು. ಶಾಲಾ ಉಪನ್ಯಾಸಕರು ಸಹಕರಿಸಿದರು.ವಲಯದ ಮೇಲ್ವಿಚಾರಕರು ಕಾರ್ಯಕ್ರಮ ನಿರೂಪಿಸಿದರು.