ಕಳ್ಳಿಗೆ ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀಮದ್ಭಾಗವತ ಸಪ್ತಾಹಕ್ಕೆ ಚಾಲನೆ.
ಬಂಟ್ವಾಳ: ಕಳ್ಳಿಗೆ ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀಮದ್ಭಾಗವತ ಸಪ್ತಾಹಕ್ಕೆ ಸೆ ೧೦ರಂದು ಭಾನುವಾರ ಭವ್ಯ ಮೆರವಣಿಗೆಯ ಮೂಲಕ ಶ್ರೀಮದ್ಭಾಗವತ ಗ್ರಂಥ ದೇವಸ್ಥಾನಕ್ಕೆ ಸಮರ್ಪಣೆಯ ಬಳಿಕ ಭಾಗವತ ಪಾರಾಯಣಕ್ಕೆ ಚಾಲನೆ ನೀಡಲಾಯಿತು.

ಶ್ರೀಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನ ದೇವಂದಬೆಟ್ಟು ಕಳ್ಳಿಗೆ ಇಲ್ಲಿ ಸಕಲ ದೋಷ ಪರಿಹಾರಕ್ಕಾಗಿ ಹಾಗೂ ಶ್ರೀ ವಿಷ್ಣು ದೇವರ ಸಂಪ್ರೀತಿಗಾಗಿ ಶ್ರೀಮದ್ಭಾಗವತ ಸಪ್ತಾಹ ಸೆ ೧೦ರಿಂದ ೧೬ರ ವರೆಗೆ ಬೆಂಗಳೂರಿನ ವಿದ್ವಾನ್ ಕುತ್ಪಾಡಿ ಶ್ರೀ ಕೃಷ್ಣರಾಜ ಆಚಾರ್ಯರ ಮುಖಾಂತರ ನಡೆಯಲಿದೆ.
ಈ ಸಂದರ್ಭದಲ್ಲಿ ರಾಧಾ ಸುರಭಿ ಗೋ ಮಂದಿರದ ಭಕ್ತಿ ಭೂಷಣ್ ದಾಸ್, ದೇವಸ್ಥಾನದ ಆಡಳಿತ ಸಮಿತಿಯ ಸದಸ್ಯರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಗವದ್ಭಕ್ತರು ಶ್ರದ್ಧಾ ಭಕ್ತಿಯಿಂದ ದೇವತಾ ಕಾರ್ಯದಲ್ಲಿ ಪಾಲ್ಗೊಂಡರು.