ಪೊಳಲಿಯಲ್ಲಿ ಉಚಿತ ಕಣ್ಣಿನ ಚಿಕಿತ್ಸಾ ಶಿಬಿರ
ಕೈಕಂಬ:ಪೊಳಲಿಯಲ್ಲಿ ಉಚಿತ ಕಣ್ಣಿನ ಚಿಕಿತ್ಸಾ ಶಿಬಿರವನ್ನು ಸೆ.೧೦ರಂದು ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ದೀಪ ಬೆಳಗಿಸಿ ಉದ್ಘಾಟಿಸಿದರು.

ಎಸ್ ಆರ್ ಹಿಂದು ಫ್ರೆಂಡ್ಸ್ ಪೊಳಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಪ್ರಾಥಮಿಕ ಅರೋಗ್ಯ ಕೇಂದ್ರ ಬೆಂಜನಪದವು, ರೋಟರಿ ಕ್ಲಬ್ ಬಂಟ್ವಾಳ, ಅಶ್ವಿನಿ ಅಫ್ಟಿಕಲ್ಸ್ ಬಿಸಿರೋಡ್ ಇವರ ಸಹಭಾಗಿತ್ವದಲ್ಲಿ ಉಚಿತ ಕಣ್ಣಿನ ಚಿಕಿತ್ಸಾ ಶಿಬಿರ ಪೊಳಲಿ ಸರ್ವಮಂಗಲಾ ಸಭಾಂಗಣದಲ್ಲಿ ಆಯೋಜಿಸಲಾದ ಶಿಬಿರದ ಕಾರ್ಯಕ್ರಮ ನಡೆಯಿತು.

ವೆಂಕಟೇಶ್ ನಾವಡ ಪೊಳಲಿ, ಕರಿಯಂಗಳ ಗ್ರಾ.ಪಂ.ಸದಸ್ಯೆ ಚಂದ್ರಾವತಿ, ಗ್ರಾಮ ಪಂಚಾಯತ್ ಸದಸ್ಯ ಲೋಕೇಶ್ ಭರಣಿ, ಡಾ. ವಿಕಾಸ್, ಡಾ ದೀಕ್ಷಾ , ಶ್ರೀ ಶಾಂತರಾಜ್ ನೇತ್ರ ಅಧಿಕಾರಿ, ಡಾ|| ಅಶ್ವಿನಿ ಸಾಗರ್ ನೇತ್ರತಜ್ಞ, ಎಸ್.ಆರ್ ಫ್ರೆಂಡ್ಸ್ ನ ಅಧ್ಯಕ್ಷ ಸಂದೀಪ್ ಎಸ್ ಆರ್ ಫ್ರೆಂಡ್ಸನ ಸದಸ್ಯರು ಉಪಸ್ಥಿತರಿದ್ದರು. ಯಶವಂತ್ ಕೋಟ್ಯಾನ್ ಸ್ವಾಗತಿಸಿ ಸುಬ್ರಾಯ ಕಾರಂತ ನಿರೂಪಿಸಿದರು.

