ಮೆಲ್ಕಾರ್: ಮೂರ್ತೆದಾರರ ಸಹಕಾರಿ ಮಹಾಮಂಡಲ ವಾರ್ಷಿಕ ಮಹಾಸಭೆ, ಸಾಧಕ ಸಂಘಗಳಿಗೆ ಸನ್ಮಾನ
ಬಂಟ್ವಾಳ: ಜಿಲ್ಲೆಯಲ್ಲಿ 18 ಪ್ರಾಥಮಿಕ ಮೂರ್ತೆದಾರರ ಸಹಕಾರ ಸಂಘ ಮತ್ತು ಸದಸ್ಯರ ಎಲ್ಲಾ ರೀತಿಯ ಸಹಕಾರದಿಂದ ಮಹಾಮಂಡಲ ಬೆಳೆದು ಹಲವಾರು ಮಂದಿಗೆ ಉದ್ಯೋಗ ನೀಡಿದೆ ಎಂದು ಮಹಾಮಂಡಲ ಅಧ್ಯಕ್ಷ ಕೆ.ಸಂಜೀವ ಪೂಜಾರಿ ಹೇಳಿದ್ದಾರೆ.
ಇಲ್ಲಿನ ಮೆಲ್ಕಾರ್ ನಲ್ಲಿ ಜಿಲ್ಲಾ ಮೂರ್ತೆದಾರರ ಸಹಕಾರಿ ಮಹಾಮಂಡಲ ವತಿಯಿಂದ ಶನಿವಾರ ನಡೆದ ವಾರ್ಷಿಕ ಮಹಾಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇದೇ ವೇಳೆ ಅಲಂಕಾರು ಮೂರ್ತೆದಾರರ ಸಹಕಾರಿ ಸಂಘ ಮತ್ತು ಸಜಿಪಮನ್ನೂರು ಮೂರ್ತೆದಾರರ ಸಹಕಾರಿ ಸಂಘಕ್ಕೆ ಜಿಲ್ಲಾ ಮಟ್ಟದ ಅತ್ಯುತ್ತಮ ಮೂರ್ತೆದಾರರ ಸಹಕಾರಿ ಸಂಘ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಉಪಾಧ್ಯಕ್ಷ ರಾಜೇಶ್ ಸುವರ್ಣ, ನಿರ್ದೇಶಕರಾದ ವಿಜಯ ಕುಮಾರ್ ಸೊರಕೆ, ಆರ್.ಸಿ. ನಾರಾಯಣ್, ಅಣ್ಣಿ ಯಾನೆ ನೋಣಯ್ಯ, ವಿಶ್ವನಾಥ ಪೂಜಾರಿ ಪಂಜ, ಶಿವಪ್ಪ ಸುವರ್ಣ, ಪುರುಷ ಸಾಲ್ಯಾನ್, ವಿಶ್ವನಾಥ ಪದ್ಮನಾಭ ಕೋಟ್ಯಾನ್, ಹರೀಶ್ ಸುವರ್ಣ, ಗಣೇಶ್ ಪೂಜಾರಿ, ಉಷಾ ಅಂಚನ್ ಮತ್ತಿತರರು ಇದ್ದರು.