ಶ್ರೀ ಕೃಷ್ಣ ಭಾರತೀಯ ಸಂಸ್ಕೃತಿಯ ರಾಯಭಾರಿ :ಪರಮೇಶ್ವರ ಹೆಗ್ಡೆ
ಬಂಟ್ವಾಳ: ಮೆಲ್ಕಾರಿನ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ಬಳಿ ನಂದಗೋಕುಲ ವೇದಿಕೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಧಾರ್ಮಿಕ ಉಪನ್ಯಾಸ ನಡೆಯಿತು.

ಶ್ರೀ ಶಾರದಾ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಪರಮೇಶ್ವರ ಹೆಗ್ಡೆಯವರು ಧಾರ್ಮಿಕ ಉಪನ್ಯಾಸವಿತ್ತು,ಸನಾತನ ಧರ್ಮವು ಸೂರ್ಯ ಚಂದ್ರರಿರುವವರೆಗೆ ಶಾಶ್ವತವಾಗಿ ಇರಲಿದೆ,ಸನಾತನ ಧರ್ಮ ಅಮರವಾಗಿದೆ.ಶ್ರೀ ಕೃಷ್ಣ ಮಾನವ ಕುಲಕ್ಕೆ ಪ್ರೇರಣಾ ಶಕ್ತಿಯಾಗಿದ್ದು ಶ್ರೀ ಕೃಷ್ಣನ ಸಂದೇಶ ನಮಗೆಲ್ಲಾ ದಾರಿದೀಪವಾಗಿದೆ,ಶ್ರೀ ಕೃಷ್ಣ ಭಾರತೀಯ ಸಂಸ್ಕೃತಿಯ ರಾಯಭಾರಿ ಎಂದರು.
ಮುಖ್ಯ ಅತಿಥಿಗಳಾದ ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತರು ವಕೀಲರಾದ ಶೈಲಜಾ ರಾಜೇಶ್ ಮಾತನಾಡುತ್ತಾ ಕೃಷ್ಣನ ಪ್ರತಿಯೊಂದು ನಡೆನುಡಿಯಲ್ಲಿ ಸಂದೇಶವಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ನರಹರಿ ಪರ್ವತ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ಪ್ರಶಾಂತ್ ಮಾರ್ಲ ವಹಿಸಿದ್ದರು.ವೇದಿಕೆಯಲ್ಲಿ ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ರಾಜೇಶ್.ಬಿ,ಯುವ ಸಂಗಮದ ಗೌರವಾಧ್ಯಕ್ಷ ಯಂ.ಯನ್.ಕುಮಾರ್,ಕೃಷ್ಣ ನಾಯ್ಕ್,ಪತ್ರಕರ್ತ ಮೋಹನ್ ಬೋಳಂಗಡಿ ಉಪಸ್ಥಿತರಿದ್ದರು.
ಇದೇ ವೇಳೆ ಎಸ್.ಎಸ್.ಎಲ್.ಸಿಯಲ್ಲಿ ೯೦% ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ,ಅನಾರೋಗ್ಯ ಪೀಡಿತರಿಗೆ ಸಹಾಯ ಧನ ವಿತರಿಸಲಾಯಿತು.ವಿವಿಧ ಆಟೋಟ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು.ಮೆಲ್ಕಾರ್ ಪ್ರಸಾದ್ ಆಚಾರ್ಯ ದಂಪತಿಗಳು ಕೃಷ್ಣ ವೇಷಧಾರಿಗಳಿಗೆ ಬಹುಮಾನ ವಿತರಿಸಿದರು.
ಯುವ ಸಂಗಮದ ಅಧ್ಯಕ್ಷ ಸತೀಶ್.ಪಿ ಸಾಲಿಯಾನ್ ಸ್ವಾಗತಿಸಿ,ಕಾರ್ಯದರ್ಶಿ ಓಂ ಪ್ರಕಾಶ್ ವಂದಿಸಿದರು.ಯುವ ಸಂಗಮದ ಮಾಜಿ ಅಧ್ಯಕ್ಷ ಶಂಕರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.