ನೀರ್ಕಜೆ ಶಾಲೆಗೆ ಸ್ಮಾರ್ಟ್ ತರಗತಿ ಕೊಡುಗೆ
ವಿಟ್ಲ: ದ. ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ನೀರ್ಕಜೆ ಇಲ್ಲಿಗೆ ಬೆಂಗಳೂರಿನ “ಶಿ ಫಾರ್ ಸೊಸೈಟಿ ಎಂಪವರ್‌ಮೆಂಟ್ ಹಬ್” ಸಂಸ್ಥೆಯವರು ಸ್ಮಾರ್ಟ್ ತರಗತಿಯನ್ನು ಕೊಡುಗೆಯಾಗಿ ನೀಡಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಸ್ಥಾಪಕ ಸದಸ್ಯೆ ವಿದ್ಯಾ ಬೆಂಗಳೂರು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರವೀಣ ಸರಳಾಯ,ಮಾಜಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಕೇಪು ಗ್ರಾಮ ಪಂಚಾಯತ್ ಅಧ್ಯಕ್ಷ ರಾಘವ ಸಾರಡ್ಕ,ಶಿಕ್ಷಣ ಸಂಯೋಜಕಿ ಸುಧಾ, ಮುಖ್ಯ ಶಿಕ್ಷಕ ಬಾಬು ನಾಯ್ಕ ಬಿ, ಸಹಶಿಕ್ಷಕರುಗಳಾದ ರವಿ, ಲೀಲಾವತಿ, ಉಷಾ, ರಾಮ ನಾಯ್ಕ, ದಿವ್ಯಶ್ರೀ ಮತ್ತು ಮಕ್ಕಳು ಉಪಸ್ಥಿತರಿದ್ದರು.
