ತಾಲೂಕು ಮಟ್ಟದ ಪ್ರೌಢಶಾಲಾ ಬಾಲಕ ಬಾಲಕಿಯರ ಕಬಡ್ಡಿ ಪಂದ್ಯಾಟ
ವಿಟ್ಲ: ಕರ್ನಾಟಕ ಸರ್ಕಾರ,ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಬಂಟ್ವಾಳ ಹಾಗೂ ಸರಕಾರಿ ಪ್ರೌಢಶಾಲೆ ವಿಟ್ಲ ಇದರ ಸಹಯೋಗದೊಂದಿಗೆ ಬಂಟ್ವಾಳ ತಾಲೂಕು ಮಟ್ಟದ ಪ್ರೌಢಶಾಲಾ ಬಾಲಕ ಬಾಲಕಿಯರ ಕಬಡ್ಡಿ ಪಂದ್ಯಾಟ ಸರಕಾರಿ ಪ್ರೌಢಶಾಲೆ (ಆರ್ ಎಂ ಎಸ್ ಎ)ವಿಟ್ಲ ಇಲ್ಲಿ ನಡೆಯಿತು.

ಈ ಪಂದ್ಯಾಟದ ಉದ್ಘಾಟನೆಯನ್ನು ಶಾಲಾ ಗೌರವಾಧ್ಯಕ್ಷ ಸುಬ್ರಾಯ ಪೈ ಯವರು ನೆರವೇರಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ ಜಿ,ತಾಲೂಕು ದೈ.ಶಿ. ಪರಿವೀಕ್ಷಣಾಧಿಕಾರಿ ವಿಷ್ಣು ನಾರಾಯಣ ಹೆಬ್ಬಾರ್,ಇ ಸಿ ಒ ಸುಧಾ,ಸಿ ಆರ್ ಪಿ ಬಿಂದು,ಬಂಟ್ವಾಳ ಸರಕಾರಿ ನೌಕರರ ಸಂಘದ ಅಧ್ಯಕ್ಷ ಉಮಾನಾಥ ರೈ,ಮುಖ್ಯ ಶಿಕ್ಷಕ ಸಂಘದ ಅಧ್ಯಕ್ಷ ಕಿರಣ್ ಕುಮಾರ್ ಬ್ರಹ್ಮಾವರ್,ಪ್ರಾ ಶಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಜೋಯಲ್ ಲೋಬೊ,ಪ್ರಾ.ಶಾ.ಸ. ಶಿಕ್ಷಕರ ಸಂಘ ದ ಕ ಜಿಲ್ಲಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ,ಬಂಟ್ವಾಳ ಪ್ರಾ ಶಾ ಸ ಶಿಕ್ಷಕ ಸಂಘದ ಅಧ್ಯಕ್ಷ ನವೀನ್ ಪಿ.ಎಸ್,ದ ಕ ಜಿಲ್ಲಾ ದೈ ಶಿ ಸಂಘದ ಉಪಾಧ್ಯಕ್ಷ ಸುರೇಶ್ ಶೆಟ್ಟಿ,ತಾಲೂಕು ದೈ ಶಿ ಶಿಕ್ಷಕರ ಸಂಘದ ಅಧ್ಯಕ್ಷೆ ರತ್ನಾವತಿ,ರಾಜೇಂದ್ರ ರೈ ನೋಡೆಲ್ ಶಿಕ್ಷಕ ವಿಟ್ಲ ವಲಯ,ಪ ಪಂ ಸದಸ್ಯರುಗಳಾದ ಗೋಪಿಕೃಷ್ಣ ಮತ್ತು ಕೆ ಎಂ ಅಶ್ರಫ್,ಬಾಬು ಕೊಪ್ಪಳ ಪ್ರೀಯಾ ಶಾಮಿಯಾನ,ಮುಖ್ಯ ಶಿಕ್ಷಕಿ ವಾರಿಜಾ ಕುಮಾರಿ,ಎಸ್ ಡಿ ಎಂ ಸಿ ಅಧ್ಯಕ್ಷರುಗಳಾದ ಶಾರದಾ ಮತ್ತು ರವಿಶಂಕರ್ ಶಾಸ್ತ್ರಿ,ಮಾಜಿ ಪಂಚಾಯತ್ ಅಧ್ಯಕ್ಷ ರಮಾನಾಥ ವಿಟ್ಲ, ಮಂಗೇಶ್ ಭಟ್,ತುಳಸೀದಾಸ್ ಶೆಣೈ, ದೈ ಶಿ ವಿದ್ಯಾಶಂಕರ್, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕಿ ಅನ್ನಪೂರ್ಣ ಸ್ವಾಗತಿಸಿದರು, ದೈಹಿಕ ಶಿಕ್ಷಕ ರಾಜೇಶ್ ವಂದಿಸಿ,ಜಗದೀಶ್ ಶೆಟ್ಟಿ ನಿರೂಪಿಸಿದರು.