ತೆಂಗು ಕೃಷಿಯ ಹೊಸ ಸಂಶೋಧನೆ,ಅವಿಷ್ಕಾರಗಳ ವಿಶ್ವ ತೆಂಗು ದಿನಾಚರಣೆ
ಬಂಟ್ವಾಳ : ಪ್ರತೀ ವರ್ಷದ ಸೆ. ೨ ರ ದಿನವನ್ನು ವಿಶ್ವ ತೆಂಗು ದಿನಾಚರಣೆಯಾಗಿ ಆಚರಿಸಲಾಗುತ್ತಿದೆ. ತೆಂಗು ಕೃಷಿಯ ಹೊಸ ಸಂಶೋಧನೆ, ಅವಿಷ್ಕಾರಗಳ ಬಗ್ಗೆ ಮನವರಿಕೆ ಮಾಡಿಸುವುದು ಇದರ ಉದ್ದೇಶವಾಗಿದೆ ಎಂದು ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕ ಜೊ ಪ್ರದೀಪ್ ಡಿಸೋಜ ಹೇಳಿದರು.
ಅವರು ಬಿ.ಸಿ.ರೋಡ್ ರಂಗೋಲಿ ಸಭಾಂಗಣದಲ್ಲಿ ಶನಿವಾರ ನಡೆದ ವಿಶ್ವ ತೆಂಗು ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ತೋಟಗಾರಿಕಾ ಇಲಾಖೆ ಮತ್ತು ಕರ್ನಾಟಕ ತೆಂಗು ಉತ್ಪಾದಕರ ಸೌಹಾರ್ಧ ಸಹಕಾರಿ ಬಂಟ್ವಾಳ ಇವುಗಳ ಜಂಟಿಆಶ್ರಯದಲ್ಲಿ ಕಾರ್ಯಕ್ರಮ ನಡೆದಿತ್ತು.ಮಂಗಳೂರು ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕ ರಾಜೇಂದ್ರ ಕಲ್ಬಾವಿ ಮಾತನಾಡಿ ಜಲ ಸಂರಕ್ಷಣೆ ಹೇಗೆ, ಯಾಕೆ ಎಂದು ವಿಡಿಯೊ ಸಹಿತ ವಿವರ ನೀಡಿದರು.
ಸಹಕಾರಿ ಅಧ್ಯಕ್ಷ ರಾಜಾ ಬಂಟ್ವಾಳ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ೨೦೨೩-೨೪ನೇ ಸಾಲಿಗೆ ೩ ಕೋಟಿ ರೂ. ಠೇವಣಿ ಸಂಗ್ರಹ ಗುರಿಯನ್ನು ಹೊಂದುವುದು, ರೈತರ ಕೃಷಿ ಉತ್ಪನ್ನಗಳ ಖರೀದಿ ಮಾರಾಟ ವ್ಯವಸ್ಥೆಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಕಾರ್ಯನಿರ್ವಹಣಾಧಿಕಾರಿ ಹರ್ಷಿತ್ ಕುಮಾರ್ ವರದಿ ವಾಚಿಸಿ ಸಂಘವು ೨೦೨೨-೨೩ನೇ ಸಾಲಿನಲ್ಲಿ ೪ ಕೋಟಿ ರೂ. ವ್ಯವಹಾರ ನಡೆಸಿ ೧.೬೩ ಲಕ್ಷ ರೂ. ನಿವ್ವಳ ಲಾಭ ಪಡೆದಿದೆ ಎಂದು ವಿವರಿಸಿದರು.
ವೇದಿಯಲ್ಲಿ ಪ್ರಗತಿಪರ ಕೃಷಿಕ ಚಂದ್ರಹಾಸ ಡಿ. ಶೆಟ್ಟಿ ರಂಗೋಲಿ, ನಿರ್ದೇಶಕರಾದ ನಾಗೇಶ್ ಕಲ್ಯಾರ್, ಯಾದವ ದರ್ಖಾಸು, ವಿಠಲ ಸಪಲ್ಯ, ಸದಾಶಿವ ಸಪಲ್ಯ, ಶಶಿಕಲಾ ಕೊಣಾಜೆ, ರಜತ್ ಉಪಸ್ಥಿತರಿದ್ದರು. ಸಹಕಾರಿಯ ಉಪಾಧ್ಯಕ್ಷ ಉಮರಗಿ ಶರಣಪ್ಪ ಸ್ವಾಗತಿಸಿ, ನಿರ್ದೇಶಕ ಪ್ರೇಮನಾಥ ಶೆಟ್ಟಿ ಅಂತರ ವಂದಿಸಿದರು. ಸದಸ್ಯರಾದ ಕೃಷ್ಣಪ್ಪ ಸಪಲ್ಯ ಅಂತರ ಮತ್ತು ಜಯಾನಂದ ಪೆರಾಜೆ ಕಾರ್ಯಕ್ರಮ ನಿರೂಪಿಸಿದರು.