ಶ್ರೀ ರಾಘವೇಂದ್ರ ಸ್ವಾಮಿಗಳ 352ನೇ ಮಧ್ಯಾರಾಧನೆ ಮಹೋತ್ಸವ
ಬೆಂಗಳೂರು:ಶ್ರೀ ಗುರು ರಾಯರ ಸನ್ನಿಧಿಯಲ್ಲಿ ” ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ352ನೇ ಮಧ್ಯಾರಾಧನೆ ಮಹೋತ್ಸವ ಜರಗಿತು.


ಪರಮ ಪೂಜ್ಯ ಶ್ರೀ1008 ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಅನುಗ್ರಹ ಆದೇಶದಂತೆ ಶ್ರೀಮಠದ ವ್ಯವಸ್ಥಾಪಕರಾದ ಆರ್,ಕೆ ವಾದಿಂದ್ರಾಚಾರ್ಯರ ನೇತೃತ್ವದಲ್ಲಿ ಪುರೋಹಿತರಾದ ಶ್ರೀ ನಂದಕಿಶೋರ ಆಚಾರ್ಯರು ಹಾಗೂ ಜಿ, ಕೆ ಆಚಾರ್ಯರ ನೇತೃತ್ವದಲ್ಲಿ ಕನಕಾಭಿಷೇಕ ಜೇನುತುಪ್ಪ ಅಭಿಷೇಕ ಹಾಗೂ ತುಪ್ಪದ ಅಭಿಷೇಕ ನೆರವೇರಿತು.

ಇದೇ ಸಂದರ್ಭದಲ್ಲಿ ಸುಧಾ ಮೂರ್ತಿ, ತೇಜಸ್ವಿ ಸೂರ್ಯ, ಚಿತ್ರನಟಿ ಪ್ರೇಮಾ, ಸಿ.ಕೆ.ರಾಮಮೂರ್ತಿ ಹಾಗೂ ಹೆಚ್ . ಡಿ ರೇವಣ್ಣ ಉಪಸ್ಥಿತರಿದ್ದರು.

