ಅ.28, 29 ರಂದು ಉಡುಪಿಯ ಅಜ್ಜರಕಾಡು ಮೈದಾನದಲ್ಲಿ ವಿಶ್ವ ಬಂಟರ ಸಮ್ಮಿಲನ
ಬೆಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಅಕ್ಟೋಬರ್ 28 ಮತ್ತು 29 ರಂದು ಉಡುಪಿಯ ಅಜ್ಜರಕಾಡು ಮೈದಾನದಲ್ಲಿ ವಿಶ್ವ ಬಂಟರ ಸಮ್ಮಿಲನದ ಪ್ರಯುಕ್ತ ನಡೆಯಲಿರುವ ವಿಶ್ವ ಬಂಟರ ಕ್ರೀಡಾಕೂಟ ಹಾಗೂ ವಿಶ್ವ ಬಂಟರ ಸಾಂಸ್ಕೃತಿಕ ವೈಭವ ಕಾರ್ಯಕ್ರಮದ ಕರಪತ್ರ ಸೆ.15ರಂದು ಬೆಂಗಳೂರಿನ ಬಂಟರ ಸಂಘದ ಅದ್ಯಕ್ಷ ಮುರಲೀಧರ ಹೆಗ್ಡೆ ಬಿಡುಗಡೆ ಮಾಡಿದರು.

ಜಾಗತಿಕ ಸಂಘಗಳ ಒಕ್ಕೂಟದ ಅದ್ಯಕ್ಷರಾದ ಐಕಳ ಹರೀಶ ಶೆಟ್ಟಿ ಕಾರ್ಯಕ್ರಮದ ವಿವರ ನೀಡಿ ಬೆಂಗಳೂರಿನ ಸಮಸ್ತ ಬಂಟರನ್ನು ಕಾರ್ಯಕ್ರಮಕ್ಕೆ ಪ್ರೀತಿ ಪೂರ್ವಕವಾಗಿ ಆಹ್ವಾನಿಸಿದರು. ಕ್ರೀಡಾಸಮಿತಿ ಸಂಚಾಲಕ ಗಿರೀಶ್ ಶೆಟ್ಟಿ ತೆಳ್ಳರ್ ಮತ್ತು ಸಾಂಸ್ಕೃತಿಕ ಸಮಿತಿ ಸಂಚಾಲಕ ಚಂದ್ರಹಾಸ ಶೆಟ್ಟಿ ಕಾರ್ಯಕ್ರಮದ ರೂಪುರೇಷೆ, ನಿಯಮಗಳ ಬಗ್ಗೆ ತಿಳಿಸಿದರು. ಈ ಸಂದರ್ಭದಲ್ಲಿ ಐಕಳ ಹರೀಶ್ ಶೆಟ್ಟಿಯವರನ್ನು ಬೆಂಗಳೂರು ಬಂಟರ ಸಂಘದ ವತಿಯಿಂದ ಗೌರವಿಸಲಾಯಿತು. ಅಜಿತ್ ಶೆಟ್ಟಿ ಉಳ್ತುರು ಕಾರ್ಯಕ್ರಮ ನಿರ್ವಹಿಸಿದರು.

ಈ ಸಂದರ್ಭದಲ್ಲಿ ಒಕ್ಕೂಟದ ನಿರ್ದೇಶಕ ಅಶೋಕ್ ಶೆಟ್ಟಿ ಬೆಳ್ಳಾಡಿ, ಮೈಸೂರ್ ಬಂಟರ ಸಂಘ ಗೌರವ ಕಾರ್ಯದರ್ಶಿ ಎಂ. ನಂದ್ಯಪ್ಪ ಶೆಟ್ಟಿ , ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ, ಕೋಶಾದಿಕಾರಿ ಉಳ್ತೂರು ಮೋಹನದಾಸ್ ಶೆಟ್ಟಿ, ಬಂಟರ ಸಂಘ ಬೆಂಗಳೂರು ಇದರ ಮಾಜಿ ಅಧ್ಯಕ್ಷ ಉಪೇಂದ್ರ ಶೆಟ್ಟಿ, ಗೌರವ ಕಾರ್ಯದರ್ಶಿ ಆನಂದರಾಮ ಶೆಟ್ಟಿ, ಉಪಾದ್ಯಕ್ಷ ಡಾ. ಜಗದೀಶ ಶೆಟ್ಟಿ, ಗೀತಾಂಜಲಿ ಅಜಿಲ, ಖಜಾಂಚಿ ಅಮರನಾಥಶೆಟ್ಟಿ ಜೊತೆ ಕಾರ್ಯದರ್ಶಿ ಶ್ಯಾಮಲ ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಸುದೀಪ ನೈಕ್ , ಕೀರ್ತನ್ ಶೆಟ್ಟಿ, ನಿರಂಜನ್ ಶೆಟ್ಟಿ, ಜಯಶ್ರೀ ಸಿ ರೈ, ಸುಧಾಕರ ಶೆಟ್ಟಿ, ಸಂದೀಪ ಶೆಟ್ಟಿ, ಕಿರಣ್ ಶೆಟ್ಟಿ, ಮಾಜಿ ಅದ್ಯಕ್ಷ ಚಂದ್ರಹಾಸ ರೈ,ಮಾಜಿ ಉಪಾಧ್ಯಕ್ಷ ಬೋಜರಾಜ ಶೆಟ್ಟಿ ಕೊರ್ಗಿ,ಮಾಜಿ ಕಾರ್ಯದರ್ಶಿ ಮಧುಕರ ಶೆಟ್ಟಿ, ಹಾಗೂ ಬಂಟರ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.
