ಕರಿಯಂಗಳ ವಲಯ ಕಾಂಗ್ರೇಸ್ ವತಿಯಿಂದ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಅಭಿನಂದನಾ ಸಮಾರಂಭ
ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮ ಪಂಚಾಯತಿಯಲ್ಲಿ ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಹಾಗೂ ಮಾಜಿ ಅಧ್ಯಕ್ಷ ಉಪಾಧ್ಯಕ್ಷರನ್ನು ಬಂಟ್ವಾಳ ಮಾಜಿ ಸಚಿವ ಬಿ ರಮಾನಾಥ ರೈ ಅವರ ನೇತೃತ್ವದಲ್ಲಿ ಅಭಿನಂದಿಸಲಾಯಿತು.
ಕರಿಯಂಗಳ ಗ್ರಾ.ಪಂಚಾಯತ್ ಇದರ ನೂತನ ಅಧ್ಯಕ್ಷೆ ರಾಧ ಲೋಕೇಶ್ ಉಪಾಧ್ಯಕ್ಷ ರಾಜು ಕೋಟ್ಯಾನ್ ಎರಡೂವರೆ ವರ್ಷ ಕರಿಯಂಗಳ ಗ್ರಾಂ.ಪಂ. ಅಧ್ಯಕ್ಷರಾಗಿ ಉತ್ತಮ ಅಭಿವೃದ್ಧಿಕಾರ್ಯಗಳನ್ನು ಮಾಡಿದ ಚಂದ್ರ ಹಾಸ ಪಲ್ಲಿಪಾಡಿ ಹಾಗೂ ಉಪಾಧ್ಯಕ್ಷೆ ವೀಣಾ ಆಚಾರ್ಯ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಮಾಜಿ ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಮಹಿಳಾ ಅಧ್ಯಕ್ಷೆ ಜಯಂತಿ ಪೂಜಾರಿ, ಪಾಣೆಮಂಗಳೂರು ಯುವ ಕಾಂಗ್ರೇಸ್ ಅಧ್ಯಕ್ಷ ಇಬ್ರಾಹಿಂ ನವಾಜ್, ಜಿಲ್ಲಾ ಪ್ರ.ಕಾರ್ಯದರ್ಶಿ ಉಮೇಶ್ ಆಚಾರ್ಯ, ಕರಿಯಂಗಳ ವಲಯಾಧ್ಯಕ್ಷ ಚಂದ್ರಹಾಸ ಪಾಲ್ಲಿಪಾಡಿ, ಕರಿಯಂಗಳ ಗ್ರಾಂ.ಪಂ.ಮಾಜಿ ಉಪಾಧ್ಯಕ್ಷೆ ವೀಣಾ ಆಚಾರ್ಯ, ಮಾಜಿ ಗ್ರಾ.ಪಂ.ಅಧ್ಯಕ್ಷ ಚಂದ್ರಶೇಖರ್ ಭಂಡಾರಿ, ಚಂದ್ರಹಾಶ ಪಾಲ್ಲಿಪಾಡಿ ಸ್ವಾಗತಿಸಿ ಇಬ್ರಾಹಿಂ ನವಾಜ್ ನಿರೂಪಿಸಿದರು ಬಸೀರ್ ಗಾಣೆಮಾರ್ ವಂದಿಸಿದರು.