ಹಿಂದೂ ರುದ್ರಭೂಮಿ ನಿರ್ಮಾಣಕ್ಕೆ ಜಮೀನು ಹಸ್ತಾಂತರಿಸುವಂತೆ ಮನವಿ
ಬಂಟ್ವಾಳ: ಸಜೀಪ ಮೂನ್ನುರು ಗ್ರಾಮದ ಶಾರದ ನಗರದಲ್ಲಿ ಹಿಂದೂ ರುದ್ರಭೂಮಿ ನಿರ್ಮಾಣಕ್ಕೆ ಮಂಜೂರಾದ ಸರಕಾರಿ ಜಮೀನು ಹಸ್ತಾಂತರಿಸುವಂತೆ ಹಿಂದೂ ರುದ್ರ ಭೂಮಿ ಸಮಿತಿ ಅಧ್ಯಕ್ಷ ಎಂ. ಸುಬ್ರಹ್ಮಣ್ಯ ಭಟ್ ಅವರ ನೇತೃತ್ವದಲ್ಲಿ ಗ್ರಾ.ಪಂ.ಪಿಡಿಒ ಹಾಗೂ ಆಡಳಿತ ಸಮಿತಿಗೆ ಅವರಿಗೆ ಮನವಿ ಸಲ್ಲಿಸಲಾಯಿತು.

1994 ರಲ್ಲಿ ಸರಕಾರ ಶಾರದ ನಗರದ ಸರ್ವೇ ನಂಬರ್ 29/1 ರಲ್ಲಿ 50 ಸೆಂಟ್ಸ್ ಸ್ಥಳ ಮಂಜೂರುಗೊಳಿಸಲಾಗಿದ್ದು,ಕಳೆದ 30 ವರ್ಷಗಳಿಂದ ಸಜೀಪ ಮೂನ್ನುರು ಗ್ರಾಮದ ನಾಗರಿಕರ ಗ್ರಾಮದ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಹಿಂದೂ ರುದ್ರ ಭೂಮಿ ಬೇಡಿಕೆ ಇನ್ನು ಕೂಡ ಈಡೇರಲಿಲ್ಲ.
ಈ ಹಿನ್ನೆಲೆಯಲ್ಲಿ ಉದ್ದೇಶಿತ ಹಿಂದೂ ರುದ್ರ ಭೂಮಿ ನಿರ್ಮಾಣಕ್ಕೆ ರಸ್ತೆ ಸಹಿತ ಮಂಜೂರಾದ ಜಮೀನು ಹಸ್ತಾಂತರಿಸಿ ಶೀಘ್ರವಾಗಿ ಸ್ಮಶಾನ ನಿರ್ಮಾಣ ಮಾಡಲು ಸಹಕರಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಸಜಿಪ ಮುನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷರು, ಕಾರ್ಯದರ್ಶಿ ಅವರಿಗೂ ಮನವಿ ಸಲ್ಲಿಸಲಾಯಿತು. ಪದಾಧಿಕಾರಿಗಳಾದ ಧನಂಜಯ ಶೆಟ್ಟಿ ಪರಾರಿ ಗುತ್ತು, ವಿಶ್ವನಾಥ್ ಪೂಜಾರಿ, ತಿಮ್ಮಪ್ಪ ಪೂಜಾರಿ, ಗೋಪಾಲ, ನವೀನ್,ಯಿಸೂಫ್ ಕರಂದ್ಲಾಡಿ ಮೊದಲಾದವರಿದ್ದರು