ಮಲೇರಿಯಾ ವಿರೋಧಿ ಮಾಸಾಚರಣೆ ಹಾಗೂ ವಿಶ್ವ ಸೊಳ್ಳೆ ದಿನಾಚರಣೆ
ಬಂಟ್ವಾಳ: ಆರೋಗ್ಯಯುತವಾದ ಸಮಾಜ ದೇಶದ ಅಭಿವೃದ್ಧಿಗೆ ಭದ್ರ ಬುನಾದಿ, ಯಾರು ಏನೇ ಕಳೆದುಕೊಂಡರೂ ಮತ್ತೆ ಪ್ರಯತ್ನಿಸಿ ಪಡೆಯಬಹುದು ಆದರೆ ಆರೋಗ್ಯ ಕಳೆದು ಹೋದರೆ ಎಲ್ಲಾ ಇದ್ದೂ ಏನೂ ಇಲ್ಲದ ಹಾಗೆ ಈ ನಿಟ್ಟಿನಲ್ಲಿ ಆರೋಗ್ಯ ಬಹು ಮುಖ್ಯ ಎಂದು ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ರಾದ ಪ್ರಶಾಂತ್ ಕೋಟ್ಯಾನ್ ಹೇಳಿದ್ದಾರೆ.
ದ.ಕ.ಜಿಲ್ಲಾ ಪಂಚಾಯತ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದ.ಕ, ಲಯನ್ಸ್ ಕ್ಲಬ್ ಬಂಟ್ವಾಳ ಹಾಗೂ ತಾಲೂಕು ಆರೋಗ್ಯಾಧಿಕಾರಿ ಕಛೇರಿ ಬಂಟ್ವಾಳ ಇವರ ಸಹಭಾಗಿತ್ವದಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆ ಹಾಗೂ ವಿಶ್ವ ಸೊಳ್ಳೆ ದಿನಾಚರಣೆಯ ಪ್ರಯುಕ್ತ ಬಂಟ್ವಾಳ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು, ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ಜಿಲ್ಲಾ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ನವೀನ್ ಚಂದ್ರ ರವರು ಸೊಳ್ಳೆ ಗಳಿಂದ ಹಲವಾರು ರೋಗಗಳು ಉಂಟಾಗುತ್ತವೆ ಹಾಗೂ ಕೆಲವು ಪ್ರಾಣಾಂತಿಕವಾಗಿರುತ್ತವೆ, ಅವುಗಳು ವಾಸ ಸ್ಥಳ ಗುರುತಿಸಿ ತಕ್ಕ ವಿಲೇವಾರಿ ಮಾಡುವುದರಿಂದ ಮುಕ್ತಿ ಪಡೆಯಲು ಸಾಧ್ಯ, ಎಂದು ಹೇಳಿದರು.
ವಿಶ್ವ ಸೊಳ್ಳೆ ದಿನಾಚರಣೆಯ ಅಂಗವಾಗಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ಸೊಳ್ಳೆ ನಿಯಂತ್ರಣ ಪರಿಸರ ಕುರಿತಾದ ಮಾದರಿಯ ತಯಾರಿ ಮತ್ತು ಪ್ರದಶ೯ನ ವಿಚಾರವಾಗಿ ಸ್ಪರ್ಧೆ ಏಪ೯ಡಿಸಲಾಗಿತ್ತು. ಈ ಸಂದರ್ಭದಲ್ಲಿ ಬಹುಮಾನವನ್ನು ವಿತರಿಸಲಾಯಿತು
ಕಾಯ೯ಕ್ರಮದಲ್ಲಿ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಎಂ.ಪಿ.,ಮಾಣಿ ಪ್ರಾಥಮಿಕ ಆರೋಗ್ಯ ಕೇಂದ್ರ ಮಾಣಿ ವೈದ್ಯಾಧಿಕಾರಿ ಡಾ. ಶಶಿಕಲಾ, ಲಯನ್ಸ್ ಕ್ಲಬ್ ನ ಪದಾಧಿಕಾರಿಗಳಾದ ಕಾಯ೯ದಶಿ೯ ಸುನಿಲ್.ಬಿ, ಕೋಶಾಧಿಕಾರಿ ಕೇಶವ ಆಚಾರ್ಯ, ಶಿಕ್ಷಣ ಸಂಯೋಜಕರಾದ ಪ್ರತಿಭಾ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ವಿದ್ಯಾ, ರವರು ಉಪಸ್ಥಿತರಿದ್ದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕುಸುಮ ಸ್ವಾಗತಿಸಿ, ಹಿರಿಯ ಪ್ರಾಥಮಿಕ ಸುರಕ್ಷಾಧಿಕಾರಿ ಮಮತಾ ವಂದಿಸಿದರು.